
ಪ್ರಜಾವಾಣಿ ವಾರ್ತೆದುಬೈ (ಪಿಟಿಐ): ವಜ್ರ ಹಾಗೂ ಜವಳಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಉದ್ಯಮದ ವೃದ್ಧಿಗಾಗಿ ದಕ್ಷಿಣ ಗುಜರಾತ್ ವಾಣಿಜ್ಯ ಮಂಡಳಿ ಹಾಗೂ ದುಬೈನ ವಾಣಿಜ್ಯ ಮಂಡಳಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ.
ದುಬೈ ವಾಣಿಜ್ಯ ಮಿಷನ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೈಫ್ ಅಲ್ ಗುಹರೈರ್ ನೇತೃತ್ವದ ಹನ್ನೊಂದು ಉದ್ದಿಮೆದಾರರು ಕಳೆದ ವಾರ ಗುಜರಾತ್‌ನ ಸೂರತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಮಿಷನ್ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. `ದುಬೈ ಹಾಗೂ ಸೂರತ್ ನಡುವೆ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗಾಗಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ~.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.