ADVERTISEMENT

ದೆಹಲಿ– ವಾಷಿಂಗ್ಟನ್‌ ನಡುವೆ ನೇರ ಪ್ರಯಾಣ

ಡಲ್ಲಾಸ್ ನಿಲ್ದಾಣದಲ್ಲಿ ಇಳಿದ ಮೊದಲ ಏರ್ ಇಂಡಿಯಾ ವಿಮಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ದೆಹಲಿ– ವಾಷಿಂಗ್ಟನ್‌ ನಡುವೆ ನೇರ ಪ್ರಯಾಣ
ದೆಹಲಿ– ವಾಷಿಂಗ್ಟನ್‌ ನಡುವೆ ನೇರ ಪ್ರಯಾಣ   

ವಾಷಿಂಗ್ಟನ್‌ : ದೆಹಲಿ ಮತ್ತು ವಾಷಿಂಗ್ಟನ್‌ ಡಿ.ಸಿ ನಡುವಿನ ನೇರ ಏರ್‌ ಇಂಡಿಯಾ ವಿಮಾನ ಸೇವೆ ಶುಕ್ರವಾರ ಆರಂಭವಾಗಿದೆ.
ಡಲ್ಲಾಸ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೊದಲ ವಿಮಾನವನ್ನು ಜಲಫಿರಂಗಿಯ ಮೂಲಕ  ಸ್ವಾಗತಿಸಲಾಯಿತು.

ವಿಮಾನ ಇಳಿಯುತ್ತಿದ್ದಂತೆ ಸಾಂಪ್ರದಾಯಿಕ ಪ್ರಾರ್ಥನೆ ನಡೆಸಲಾಯಿತು. ವಾರದಲ್ಲಿ ಮೂರು  ಬಾರಿ ಈ ವಿಮಾನ ಹಾರಾಟ ನಡೆಸಲಿದ್ದು, ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳ ರಾಜಧಾನಿಗಳ ನಡುವೆ ಸಂಪರ್ಕಕ್ಕೆ ಅನುಕೂಲವಾಗಲಿದೆ. 

ಅಮೆರಿಕದಲ್ಲಿನ ಭಾರತದ ರಾಯಭಾರಿ ನವತೇಜ್‌ ಸರ್ನಾ, ಏರ್‌ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹಾನಿ ಮತ್ತು ಸಂಸ್ಥೆಯ ವಾಣಿಜ್ಯ ವಿಭಾಗದ ನಿರ್ದೇಶಕ ಪಂಕಜ್‌ ಶ್ರೀವಾತ್ಸವ ಉದ್ಘಾಟನಾ ವಿಮಾನದಲ್ಲಿ ಪ್ರಯಾಣಿಸಿದ ಪ್ರಮುಖರು.

ADVERTISEMENT

ಸದ್ಯ ನೇವಾರ್ಕ್‌, ನ್ಯೂಯಾರ್ಕ್‌ ಮತ್ತು ಷಿಕಾಗೊ ನಡುವೆ ಪ್ರತಿದಿನ ವಿಮಾನ ಸೌಲಭ್ಯವಿದೆ.  ದೆಹಲಿ– ಸ್ಯಾನ್‌ಫ್ರಾನ್ಸಿಸ್ಕೊ  ನಡುವಿನ ವಿಮಾನ ವಾರದಲ್ಲಿ ಆರು  ಬಾರಿ ಹಾರಾಟ ನಡೆಸುತ್ತಿದೆ. ಲಾಸ್‌ ಏಂಜಲೀಸ್‌, ಹ್ಯೂಸ್ಟನ್‌ ಸೇರಿದಂತೆ ಅಮೆರಿಕದ ಇತರ ನಗರಗಳಿಗೂ  ವಿಮಾನ ಸಂಪರ್ಕ ಕಲ್ಪಿಸಲು  ಏರ್‌ ಇಂಡಿಯಾ ಉದ್ದೇಶಿಸಿದೆ. ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ 20ರಷ್ಟು ಪಾಲು, ಅಮೆರಿಕಕ್ಕೆ ವಿಮಾನ ಸೌಲಭ್ಯ ಒದಗಿಸಿರುವುದರಿಂದ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.