ADVERTISEMENT

ದೋಣಿ ಮುಳುಗಿ 40 ಜನ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

>ಕ್ವಾಲಾಲಂಪುರ (ಎಎಫ್‌ಪಿ): ದೋಣಿಯಲ್ಲಿ ತಾಯ್ನಾಡಿಗೆ ವಾಪಸ್ ಬರುತ್ತಿದ್ದ ಇಂಡೊನೇಷ್ಯಾದ 40 ಅಕ್ರಮ ವಲಸಿಗರು ಮಲೇಷ್ಯಾದ ಕರಾವಳಿ ತೀರದಲ್ಲಿ ನಾಪತ್ತೆಯಾಗಿದ್ದಾರೆ.

ದೋಣಿಯಲ್ಲಿ ಒಟ್ಟು 44 ಜನ ಪ್ರಯಾಣಿಸುತ್ತಿದ್ದರು. ದೋಣಿ ಮುಗುಚಿದ ಪರಿಣಾಮ 44 ಜನರ ಪೈಕಿ ಕೇವಲ ನಾಲ್ವರನ್ನು ಮಾತ್ರ ರಕ್ಷಿಸಲಾಯಿತು. ಉಳಿದ 40 ಮಂದಿ ಕಣ್ಮರೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಣ್ಮರೆಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಕಣ್ಮರೆಯಾದವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.