ADVERTISEMENT

ಧಾರ್ಮಿಕ ಕೇಂದ್ರಗಳ ಮೇಲೆ ನಾಡಬಾಂಬ್ ದಾಳಿ: ತನಿಖೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ನ್ಯೂಯಾರ್ಕ್ (ಪಿಟಿಐ): ಕೆಲವು ದುಷ್ಕರ್ಮಿಗಳು ಇಲ್ಲಿಯ ಹಿಂದೂ ಪೂಜಾ ಸ್ಥಳ ಮತ್ತು ಇಸ್ಲಾಮಿಕ್ ಕೇಂದ್ರಗಳ ಮೇಲೆ ಸೋಮವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಮೇಯರ್ ಮೈಕೆಲ್ ಬ್ಲೂಂಬರ್ಗ್ ಹೇಳಿದ್ದಾರೆ.

ದುಷ್ಕರ್ಮಿಗಳು ಒಂದು ಪೂಜಾ ಸ್ಥಳ, ಒಂದು ಇಸ್ಲಾಮಿಕ ಕೇಂದ್ರ ಸೇರಿದಂತೆ ನಾಲ್ಕು ಕಡೆ ನಾಡ ಬಾಂಬ್‌ಎಸೆದಿದ್ದರಿಂದ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗೆ ಒಳಗಾಗಿರುವ ಇಸ್ಲಾಮಿಕ್ ಕೇಂದ್ರವು ಶಿಕ್ಷಣ, ಶವಸಂಸ್ಕಾರ ಮತ್ತು ಹಜ್ ಯಾತ್ರೆಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಹಿಂದೂ ಪೂಜಾ ಸ್ಥಳ ಎಂದು ಹೇಳಲಾಗುತ್ತಿರುವ ಮನೆಯಲ್ಲಿ ನಿಯಮಿತವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಕೈಬಾಂಬ್ ಎಸೆದ ಸಂದರ್ಭಲ್ಲಿ ಇಸ್ಲಾಮಿಕ್ ಕೇಂದ್ರದಲ್ಲಿ ಸುಮಾರು 80 ಜನರು ಇದ್ದರು. ಬಾಂಬ್ ಸ್ಫೋಟದಿಂದ ಕಟ್ಟಡದ ಗಾಜುಗಳು ಚೂರಾಗಿವೆ ಎಂದು ಇಮಾಮ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.