ಲಂಡನ್ (ಐಎಎನ್‌ಎಸ್): ಬ್ರಾಡ್‌ಪೋರ್ಡ್‌ನ ನದಿಯಲ್ಲಿ ಶುಕ್ರವಾರ ಮೃತದೇಹವೊಂದು ಪತ್ತೆಯಾಗಿದ್ದು, ಈ ಮೃತದೇಹ ಇತ್ತೀಚೆಗೆ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆಯದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಐರ್ ನದಿಯಲ್ಲಿ ಮಧ್ಯಾಹ್ನ 1.35ರ ಸುಮಾರಿಗೆ ಪತ್ತೆಯಾಗಿರುವ ಈ ಮೃತದೇಹ, ಕಳೆದ ಅಕ್ಟೋಬರ್ 23ರಿಂದ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆ ಸೀಮ್‌ಬರ್ಜೀತ್ ಕೌರ್ (35) ಅವರದ್ದಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.