ನ್ಯೂಯಾರ್ಕ್ (ಪಿಟಿಐ): ’ನನ್ನ ಮೇಲಿನ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ’ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ದೇವಯಾನಿ ಖೋಬ್ರಾಗಡೆ ಶುಕ್ರವಾರ ತಿಳಿಸಿದ್ದಾರೆ.
ಅಮೆರಿಕವು ಭಾರತಕ್ಕೆ ಹಿಂದಿರುಗಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಮರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಮೆರಿಕ ತನಿಖಾಧಿಕಾರಿಗಳು ಮಾಡಿರುವ ಆರೋಪಗಳು ಆಧಾರರಹಿತ, ನಾನು ಯಾವುದೇ ತಪ್ಪನ್ನು ಎಸಗಿಲ್ಲ ಎಂದು ದೇವಯಾನಿ ತಮ್ಮನ್ನು ಸಮರ್ಥಿಸಿಕೊಂಡರು.
ಈ ಘಟನೆಯಿಂದ ನನ್ನ ಕುಟುಂಬ ಹಾಗೂ ಮಕ್ಕಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ದೇವಯಾನಿ ತಿಳಿಸಿದರು.
ಅಮೆರಿಕದ ಈ ನಡೆಯಿಂದ ದೇವಯಾನಿ ಬಂಧನ ಬೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಅವರು ವಿಚಾರಣೆಯಿಂದ ನುಣುಚಿಕೊಳ್ಳಲ್ಲು ಸಾಧ್ಯವಿಲ್ಲ ಎಂದು ಅಮೆರಿಕದ ಮೂಲಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.