ಇಸ್ಲಾಮಾಬಾದ್ (ಪಿಟಿಐ): ಗಲಭೆಪೀಡಿತ ದಕ್ಷಿಣ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರು ನಾಲ್ವರು ಪಾಕಿಸ್ತಾನಿ ಸೈನಿಕರನ್ನು ಕೊಂದು ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನೆ ನಡೆಸಿದ ದಾಳಿಯಿಂದ ಇಬ್ಬರು ಉಗ್ರರು ಸತ್ತಿದ್ದಾರೆ.
ಸರಾರೊಘ ಎಂಬಲ್ಲಿ ಗುರುವಾರ ಉಗ್ರರು ಬಾಂಬ್ ನಿಷ್ಕ್ರಿಯ ದಳದ ಮೇಲೆ ರಾಕೆಟ್ ದಾಳಿ ನಡೆಸಿ ಈ ಹತ್ಯೆ ನಡೆಸಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.