ADVERTISEMENT

ನಾಸಾ ವಿರುದ್ಧ ಕಾನೂನು ಸಮರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ವಾಷಿಂಗ್ಟನ್ (ಪಿಟಿಐ): ದೇಶದ ಭದ್ರತೆಯ ಹಿತದೃಷ್ಟಿಯಿಂದ ಅಂತರ್ಜಾಲ ಹಾಗೂ ದೂರವಾಣಿ ಕರೆಗಳ ಮೇಲೆ ನಿಗಾ ಇಡುವ ನಾಸಾದ ಕ್ರಮವನ್ನು ಪ್ರಶ್ನಿಸಿ ಅಮೆರಿಕದ 19 ಕಂಪೆನಿಗಳು ಕಾನೂನು ಸಮರ ಹೂಡಿವೆ.

ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್ (ಇಎಫ್‌ಎಫ್) ನೇತೃತ್ವದಲ್ಲಿ ಯುನಿಟೇರಿಯನ್ ಚರ್ಚ್ ಗ್ರೂಪ್ ಸೇರಿದಂತೆ ಒಟ್ಟು 19 ಕಂಪೆನಿಗಳು ನಾಸಾ ವಿರುದ್ಧ ಮೊಕದ್ದಮೆ ಹೂಡಿವೆ.

ಅಮೆರಿಕ ಪ್ರಜೆಗಳ ದೂರವಾಣಿ ಕರೆ ಹಾಗೂ ಅಂತರ್ಜಾಲದ ಮೇಲೆ ನಿಗಾ ಇಡುವ ನಾಸಾದ ರಹಸ್ಯ ಕಾರ್ಯಾಚರಣೆ ಬಗ್ಗೆ ಸಿಐಎ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಅವರು ಮಾಧ್ಯಮಗಳಿಗೆ ಮಾಹಿತಿ ಬಹಿರಂಗಪಡಿಸಿದ್ದರು. ಈ ಪ್ರಕರಣದ ಬಳಿಕ ಇದೇ ಮೊದಲ ಬಾರಿ ನಾಸಾ ವಿರುದ್ಧ ಅಮೆರಿಕದ ಕಂಪೆನಿಗಳು ದಾವೆ ಹೂಡಿವೆ.

` ಈ ರೀತಿ ಅಕ್ರಮವಾಗಿ ಸಾರ್ವಜನಿಕರ ದೂರವಾಣಿ ಕರೆಗಳ ಮೇಲೆ ನಿಗಾ ಇಡುವ ಅಮೆರಿಕ ಸರ್ಕಾರದ ಈ ಕಾರ್ಯಕ್ರಮ ಸಂವಿಧಾನಬಾಹಿರವಾಗಿದೆ' ಎಂದು ಇಎಫ್‌ಎಫ್ ಕಾನೂನು ನಿರ್ದೇಶಕ ಸಿಂಡಿ ಕೊನ್ ಆರೋಪಿಸಿದ್ದಾರೆ.

ಮೈಕ್ರೊಸಾಫ್ಟ್ ಸ್ಪಷ್ಟನೆ:  `ನಮ್ಮ ಗ್ರಾಹಕರ ವೈಯಕ್ತಿಕ ಮಾಹಿತಿ ಪಡೆಯುವುದಕ್ಕೆ ನಾವು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ' ಎಂದು ಮೈಕ್ರೊಸಾಫ್ಟ್ ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.