ADVERTISEMENT

ನೇಪಾಳದಲ್ಲಿ ವಿಮಾನ ದುರಂತ: 50 ಮಂದಿ ಮೃತಪಟ್ಟಿರುವ ಶಂಕೆ

ಏಜೆನ್ಸೀಸ್
Published 12 ಮಾರ್ಚ್ 2018, 11:17 IST
Last Updated 12 ಮಾರ್ಚ್ 2018, 11:17 IST
ವಿಮಾನ ದುರಂತಕ್ಕೀಡಾದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವುದು (ಎಎನ್‌ಐ ಟ್ವಿಟರ್ ಚಿತ್ರ)
ವಿಮಾನ ದುರಂತಕ್ಕೀಡಾದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವುದು (ಎಎನ್‌ಐ ಟ್ವಿಟರ್ ಚಿತ್ರ)   

ಕಾಠ್ಮಂಡು: ಬಾಂಗ್ಲಾದೇಶದ ಪ್ರಯಾಣಿಕ ವಿಮಾನವೊಂದು ನೇಪಾಳದ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತಕ್ಕೀಡಾಗಿದೆ. ಸುಮಾರು 50 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ಶಂಕಿಸಲಾಗಿದೆ.

ಬಾಂಗ್ಲಾದೇಶದ ಢಾಕದಿಂದ ಬಂದ ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

‘ಮೃತಪಟ್ಟವರ ಸಂಖ್ಯೆ ಎಷ್ಟೆಂದು ಈಗಲೇ ಹೇಳಲಾಗದು. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ನಮ್ಮ ಆದ್ಯತೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ’ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ವಿಮಾನದಲ್ಲಿ 67 ಪ್ರಯಾಣಿಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.