ಇಸ್ಲಾಮಾಬಾದ್(ಐಎಎನ್‌ಎಸ್): ಆಫ್ಘಾನಿಸ್ತಾನದಲ್ಲಿಯ ನ್ಯಾಟೊ ಪಡೆಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸೇನೆಯ ಭಾರಿ ಸರಕು ವಾಹನಗಳು ಸಂಚರಿಸಿದ್ದರಿಂದ ರಾಷ್ಟ್ರದ ರಸ್ತೆಗಳು ಹಾಳಾಗಿ ಸುಮಾರು ನೂರು ಶತಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಚಾರವನ್ನು ಅಮೆರಿಕದ ಗಮನಕ್ಕೆ ತರಲಾಗಿದ್ದು, ಇದುವರೆಗೂ ಪರಿಹಾರದ ಭರವಸೆ ದೊರಕಿಲ್ಲ ಎಂದು ಸಂಪರ್ಕ ಸಚಿವ ಅರಬಾಬ್ ಅಲಂಗಿರ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನು ಮುಂದೆ ನ್ಯಾಟೊ ಪಡೆಗಳಿಗೆ ಪಾಕಿಸ್ತಾನದ ರಸ್ತೆಗಳನ್ನು ಬಳಸಲು ಅವಕಾಶ ಕೊಟ್ಟರೆ ರಸ್ತೆ ತೆರಿಗೆ ವಸೂಲಿ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.