ಲಾಹೋರ್ (ಪಿಟಿಐ): ಅಮೆರಿಕ ವಿರುದ್ಧ ಕಿಡಿಕಾರುತ್ತಿರುವ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್, ನ್ಯಾಟೊ ಪಡೆಗಳಿಗೆ ಮುಚ್ಚಲಾಗಿರುವ ಸಾಮಗ್ರಿ ಸರಬರಾಜು ಮಾರ್ಗವನ್ನು ಮತ್ತೆ ತೆರವುಗೊಳಿಸಬಾರದು ಎಂದು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ತರಲು ಸಹಿ ಸಂಗ್ರಹ ಆಂದೋಲನ ಆರಂಭಿಸಿದ್ದಾನೆ.
40ಕ್ಕೂ ಹೆಚ್ಚು ಉಗ್ರವಾದಿಗಳ ಸಂಘಟನೆಗಳನ್ನು ಒಳಗೊಂಡಿರುವ `ದೆಫಾ-ಎ-ಪಾಕಿಸ್ತಾನ್ ಮಂಡಳಿ~ ಮೂಲಕ ಈ ಚಳವಳಿಯನ್ನು ಸಯೀದ್ ನಡೆಸುತ್ತಿದ್ದಾನೆ. ಅಮೆರಿಕದ ಮಾತಿಗೆ ಮರುಳಾಗಿ ನ್ಯಾಟೊ ಪಡೆಗಳಿಗೆ ಮಾರ್ಗ ತೆರವು ಮಾಡದಂತೆ ಸರ್ಕಾರದ ಒತ್ತಡ ತರಲು ರಾಷ್ಟ್ರದಾದ್ಯಂತ ಸಂಚರಿಸಿ ಜನರನ್ನು ಒಗ್ಗೂಡಿಸುವುದಾಗಿ ಶಪಥ ಮಾಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.