ADVERTISEMENT

ಪತ್ನಿಗೆ ಕಿರುಕುಳ: ರಾಜತಾಂತ್ರಿಕ ಅಧಿಕಾರಿ ವರ್ಮಾ ವರ್ಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:55 IST
Last Updated 16 ಜನವರಿ 2011, 19:55 IST

ನವದೆಹಲಿ (ಪಿಟಿಐ): ಪತ್ನಿಯ ಮೇಲೆ ಹಲ್ಲೆ ಮಾಡಿದ ಆಪಾದನೆ ಎದುರಿಸುತ್ತಿರುವ ಲಂಡನ್‌ನ ಭಾರತೀಯ ರಾಯಭಾರ ಕಚೇರಿಯ ಹಿರಿಯ ರಾಜತಾಂತ್ರಿಕ ಅಧಿಕಾರಿ ಅನಿಲ್ ವರ್ಮಾ ಅವರನ್ನು ದೆಹಲಿಗೆ ವರ್ಗಾಯಿಸಲಾಗಿದೆ.

ಪಶ್ಚಿಮಬಂಗಾಳ ಕೇಡರಿನ ಐಎಎಸ್ ಅಧಿಕಾರಿಯಾಗಿರುವ ವರ್ಮಾ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪತ್ನಿಯ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ವರ್ಮಾ ಅವರ ವಿರುದ್ಧ ವಿಚಾರಣೆ ನಡೆಯಲಿದ್ದು, ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಕಳೆದ ಡಿಸೆಂಬರ್ 11ರಂದು ವರ್ಮಾ ಅವರು ಪತ್ನಿ ಪರೊಮಿತ ಅವರ ಮೇಲೆ ಹಲ್ಲೆ ಮಾಡಿದಾಗ ಅವರ ಮೂಗಿನಿಂದ ರಕ್ತ ಒಸರುತ್ತಿತ್ತು ಹಾಗೂ ಬಟ್ಟೆಯಲ್ಲಿ ರಕ್ತದ ಕಲೆಯಾಗಿತ್ತು. ಅವರು ನೋವು ತಾಳಲಾರದೆ ಕಿರುಚಿಕೊಳ್ಳುತ್ತಿದ್ದರು ಎಂದು ‘ಡೈಲಿ ಮೇಲ್’ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.