ADVERTISEMENT

ಪರಮಾಣು ಸ್ಥಾವರಗಳ ಪುನರಾರಂಭಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಟೋಕಿಯೊ (ಎಎಫ್‌ಪಿ): ಸ್ಥಗಿತಗೊಂಡಿದ್ದ ಎರಡು ಪರಮಾಣು ಘಟಕಗಳನ್ನು ಮತ್ತೆ ಆರಂಭಿಸುವ ಜಪಾನ್ ನಿರ್ಧಾರವು ಇದೀಗ ಮಾಧ್ಯಮ ಹಾಗೂ ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಫುಕುಶಿಮಾ ದುರಂತದ ಹಿನ್ನೆಲೆಯಲ್ಲಿ ಪರಮಾಣು ಸ್ಥಾವರಗಳ ಸುರಕ್ಷೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ.
`ಸರ್ಕಾರ ಅವಸರದಲ್ಲಿ ಈ ಕೆಲಸಕ್ಕೆ ಯಾಕೆ ಮುಂದಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇವುಗಳ ಸುರಕ್ಷೆಯನ್ನು ಇನ್ನಷ್ಟು ಖಾತ್ರಿಗೊಳಿಸಿಕೊಳ್ಳಬೇಕಿದೆ~ ಎಂದು ಪ್ರಮುಖ ಪತ್ರಿಕೆ `ಮೈನಿಶಿ ಶಿಂಬನ್~ ಸಂಪಾದಕೀಯದಲ್ಲಿ ಹೇಳಿದೆ.

`ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸಲು ದೇಶದ ಪಶ್ಚಿಮ ಭಾಗದಲ್ಲಿರುವ ಒಯ್ ಪರಮಾಣು ಸ್ಥಾವರವನ್ನು ಪುನರಾರಂಭಿಸುವ ಅಗತ್ಯವಿದೆ~ ಎಂದು ಶುಕ್ರವಾರ ಪ್ರಧಾನಿ ಯೊಶಿಹಿಕೊ ನೊಡಾ ಅವರು ಹೇಳಿದ್ದರು.
`ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗುವುದಿಲ್ಲ ಎನ್ನುವುದು ಪ್ರತ್ಯೇಕ ಅಧ್ಯಯನಗಳಿಂದ ತಿಳಿದು ಬಂದಿದೆ.
 
ವಿಪತ್ತು ನಿರ್ವಹಣೆಗೆ ಪರಮಾಣು ಉದ್ದಿಮೆ ಹಾಗೂ ಸರ್ಕಾರ ಎರಡೂ ವಿಫಲವಾಗಿವೆ. ಆದ್ದರಿಂದ ಮತ್ತೆ ಈ ಪರಮಾಣು ಘಟಕಗಳನ್ನು ಆರಂಭಿಸುವ ತುರ್ತು ಏನಿದೆ?~ ಎಂದು ಗ್ರೀನ್‌ಪೀಸ್‌ನ ಜಪಾನ್ ವ್ಯವಸ್ಥಾಪಕ ವಕಾವೊ ಹನಾವೊಕಾ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.