ಸಿಂಗಪುರ (ಎಎಫ್‌ಪಿ): ಭೂಕಂಪ ಪೀಡಿತ ಪರಮಾಣು ಸ್ಥಾವರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು ಜಪಾನಿನಿಂದ ಆಮದು ಮಾಡಿಕೊಳ್ಳಲಾದ ಆಹಾರ ಉತ್ಪನ್ನಗಳಲ್ಲಿ ವಿಕಿರಣದ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಸಿಂಗಪುರ ತಿಳಿಸಿದೆ. ತೈವಾನ್ ಸಹ ಇದೇ ಕ್ರಮ ಅನುಸರಿಸುತ್ತಿದೆ.
ಸಿಂಗಪುರದಲ್ಲಿ ಜಪಾನಿ ಖಾದ್ಯಗಳು ತುಂಬಾ ಜನಪ್ರಿಯವಾಗಿವೆ. ಮಾದರಿ ಪಡೆದು ವಿಕಿರಣಕ್ಕೆ ಒಳಗಾಗಿದೆಯೇ ಎಂದು ಪರೀಕ್ಷಿಸಲಾಗುವುದು. ನವೀನ ಉತ್ಪನ್ನಕ್ಕೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಜಪಾನಿ ಆಹಾರ ಸಮುದ್ರದ ಮೂಲಕ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.