ADVERTISEMENT

ಪಾಕಿಸ್ತಾನದ ಜನಕ ಜಿನ್ನಾ ಮಗಳು ನಿಧನ

ಪಿಟಿಐ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ದೀನಾ ವಾಡಿಯಾ
ದೀನಾ ವಾಡಿಯಾ   

ಇಸ್ಲಾಮಾಬಾದ್‌: ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಅವರ ಮಗಳು, ನಿರ್ಭೀತಿಗೆ ಹೆಸರಾಗಿದ್ದ ದೀನಾ ವಾಡಿಯಾ (98) ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಿಧನರಾದರು.

ಇವರು ಬಾಂಬೆ ಡೈಯಿಂಗ್‌ನ ಅಧ್ಯಕ್ಷ ನುಸ್ಲಿವಾಡಿಯಾ ಅವರ ತಾಯಿ. 1930ರ ದಶಕದಲ್ಲಿ ನೆವಿಲ್ಲಾ ವಾಡಿಯಾ ಎಂಬ ಪಾರ್ಸಿ ಕುಟುಂಬದ ಯುವಕನ್ನು ವರಿಸಲು  ದೀನಾ ಮುಂದಾದಾಗ, ಅವರ ತಂದೆ, ‘ಭಾರತದಲ್ಲಿ ಸಾವಿರಾರು ಮುಸ್ಲಿಂ ಯುವಕರಿದ್ದಾರೆ, ಪಾರ್ಸಿಯ ಹುಡುಗನನ್ನೇಕೆ ಮದುವೆಯಾಗುತ್ತಿದ್ದಿ ಎಂದು ಪ್ರಶ್ನಿಸಿದ್ದರು. ಆಗ ದೀನಾ, ಭಾರತದಲ್ಲಿ ಸಾವಿರಾರು ಮುಸ್ಲಿಂ ಮಹಿಳೆ ಇದ್ದರು. ಆದರೆ ನೀವೇಕೆ ಪಾರ್ಸಿ ಯುವತಿಯನ್ನು ಮದುವೆಯಾಗಿದ್ದು ಎಂದು ಪ್ರಶ್ನಿಸಿ ಅವರ ಬಾಯಿ ಮುಚ್ಚಿಸಿದ್ದರು. ಆ ಸಮಯದಲ್ಲಿ ಭಾರತೀಯ ಮುಸ್ಲಿಮರನ್ನು ಸಂಘಟಿಸಲು ಹೋರಾಟ ನಡೆಸುತ್ತಿದ್ದ ಜಿನ್ನಾ ಅವರು, ಮಗಳ ಈ ನಡೆಯಿಂದಾಗಿ ಅವಮಾನದಿಂದ ಕುಗ್ಗಿ ಹೋಗಿದ್ದರು.

ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಜಿನ್ನಾ ಅವರ ಭವ್ಯ ಬಂಗಲೆಯ ಒಡೆತನಕ್ಕಾಗಿ ಕೇಂದ್ರ ಸರ್ಕಾರದ ಜೊತೆ ಸುದೀರ್ಘ ಕಾನೂನು ಸಮಯ ನಡೆಸುತ್ತಿದ್ದರು ದೀನಾ. ಈ ಪ್ರಕರಣವಿನ್ನೂ ಮುಂಬೈ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಇವರ ಸಾವಿರ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.