ADVERTISEMENT

ಪಾಕಿಸ್ತಾನ ನಡೆ: ಚೀನಾ ಮೌನ

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಪಾಕಿಸ್ತಾನ ನಡೆ: ಚೀನಾ ಮೌನ
ಪಾಕಿಸ್ತಾನ ನಡೆ: ಚೀನಾ ಮೌನ   

ಬೀಜಿಂಗ್: ಗಿಲ್ಗಿಟ್–ಬಾಲ್ಟಿಸ್ತಾನದ ಮೇಲೆ ಆಡಳಿತಾತ್ಮಕ ಅಧಿಕಾರ ಚಲಾಯಿಸಲು ಮುಂದಾಗಿರುವ ಪಾಕಿಸ್ತಾನದ ನಡೆ ಬಗ್ಗೆ ಚೀನಾ ನೇರವಾಗಿ ಪ್ರತಿಕ್ರಿಯಿಸಿಲ್ಲ.

ವಿವಾದಿತ ಪ್ರದೇಶದ ಮುಖಾಂತರವೇ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಹಾದುಹೋಗುತ್ತದೆ. ಭಾರತ–ಪಾಕ್ ನಡುವಿನ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕು ಎಂಬುದು ಚೀನಾದ ನಿಲುವು. ಹೀಗಾಗಿ ಯೋಜನೆ ಮೇಲೆ ಈ ನಡೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಹೇಳಿದೆ.

‘ಸಿಪಿಇಸಿ ಒಂದು ಆರ್ಥಿಕ ಸಹಕಾರ ಕಾರ್ಯಕ್ರಮ ಎಂಬುದನ್ನು ಚೀನಾ ಹಲವು ಬಾರಿ ಸ್ಪಷ್ಟಪಡಿಸಿದೆ. ಇದು ಆರ್ಥಿಕ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಹೆಚ್ಚಿಸುವ ಸಹಕಾರಿ ತತ್ವದ ಚೌಕಟ್ಟನ್ನು ಹೊಂದಿದೆ. ಕಾಶ್ಮೀರ ವಿಷಯದ ಬಗ್ಗೆ ಚೀನಾ ಹೊಂದಿರುವ ನಿಲುವಿನ ಮೇಲೆ ಸಿಪಿಇಸಿ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಹು ಚುಂಗ್‌ಯಿಂಗ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.