ADVERTISEMENT

ಪಾಕಿಸ್ತಾನ: ಮಸೂದೆ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯನ್ನು ಸಂಸತ್ ಹಾಗೂ ಸರ್ಕಾರಕ್ಕೆ ಉತ್ತರದಾಯಿತ್ವವನ್ನಾಗಿ ಮಾಡುವ ಮಸೂದೆಯನ್ನು ಪಾಕಿಸ್ತಾನದ ಮೇಲ್ಮನೆಯಲ್ಲಿ ಹಿಂಪಡೆಯಲಾಗಿದೆ.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಕ್ತಾರ ಫರಾತುಲ್ಲಾ ಬಾಬರ್, ಕಳೆದ ವಾರ ಈ ಖಾಸಗಿ ಮಸೂದೆಯನ್ನು ಮಂಡಿಸಿದ್ದರು.

ಮಸೂದೆಯನ್ನು ಹಿಂಪಡೆಯುವುದಕ್ಕೆ ಜರ್ದಾರಿ ಅವರ ಬೆಂಬಲವೂ ಇತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.