ADVERTISEMENT

ಪಾಕ್ ಮಸೀದಿಯಲ್ಲಿ ಸ್ಫೋಟ: 30 ಜನರ ಸಾವು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2011, 10:45 IST
Last Updated 19 ಆಗಸ್ಟ್ 2011, 10:45 IST
ಪಾಕ್ ಮಸೀದಿಯಲ್ಲಿ ಸ್ಫೋಟ: 30 ಜನರ ಸಾವು
ಪಾಕ್ ಮಸೀದಿಯಲ್ಲಿ ಸ್ಫೋಟ: 30 ಜನರ ಸಾವು   

ಇಸ್ಲಾಮಾಬಾದ್ (ಐಎಎನ್ಎಸ್): ವಾಯವ್ಯ ಪಾಕಿಸ್ತಾನದ ಜನ ನಿಬಿಡ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ 30 ಜನ ಮೃತರಾಗಿ 50ಕ್ಕೂ ಹೆಚ್ಚು ಜನ ಗಾಯಗೊಂಡರು.

ಆಫ್ಘಾನಿಸ್ತಾನ ಗಡಿಯಲ್ಲಿನ ಜಮ್ರುದ್ ಜಿಲ್ಲೆಯ ಮಸೀದಿಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಟಿವಿ ವಾಹಿನಿಯೊಂದರ ವರದಿಯನ್ನು ಉಲ್ಲೇಖಿಸಿ ಕ್ಷಿನ್ ಹುವಾ ಸುದ್ದಿ ಸಂಸ್ಥೆ ಹೇಳಿದೆ.

ಸ್ಫೋಟ ಸಂಭವಿಸಿದಾಗ ನೂರಾರು ಮಂದಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡುತ್ತಿದ್ದರು ಎಂದು ವರದಿ ಹೇಳಿದೆ.

ಸ್ಫೋಟದ ಪರಿಣಾಮವಾಗಿ ಮಸೀದಿ ಧ್ವಂಸಗೊಂಡಿದೆ. ಮಸೀದಿಯ ಒಳಗಡೆಯೇ ಬಾಂಬ್ ಇರಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಜಿಯೋ ಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.