ADVERTISEMENT

ಪುಸ್ತಕದ ಬದಲಿಗೆ ಐಪಾಡ್ !

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೀಜಿಂಗ್ (ಐಎಎನ್‌ಎಸ್): ಶೀಘ್ರದಲ್ಲೇ ಚೀನಾದ ಮಕ್ಕಳು ಶಾಲೆಗಳಲ್ಲಿ ಪುಸ್ತಕಗಳ ಬದಲು ಐಪಾಡ್ ಕೊಂಡೊಯ್ಯಲಿದ್ದು, ಶಾಲಾ ಆಡಳಿತ ಮಂಡಳಿಗಳೂ ಇದರ ಬಳಕೆಗೆ ಅವಕಾಶ ಕಲ್ಪಿಸುವ ಚಿಂತನೆಯಲ್ಲಿವೆ.

ಈಗಾಗಲೇ ನನ್‌ಜಿಂಗ್ ನಗರದ ಜಿನ್‌ಲಿಂಗ್ ಪ್ರೌಢಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಪ್ರಯೋಗಾರ್ಥವಾಗಿ ಐಪಾಡ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಸೆಪ್ಟೆಂಬರ್‌ನಿಂದ ಎಲ್ಲಾ ಶಾಲೆಗಳಲ್ಲೂ ಐಪಾಡ್ ಬಳಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.