ADVERTISEMENT

ಪೆಟ್ರೋಲ್ ಬಂಕ್‌ನಲ್ಲಿ ಸ್ಫೋಟ: 73 ಸಾವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST
ಪೆಟ್ರೋಲ್ ಬಂಕ್‌ನಲ್ಲಿ ಸ್ಫೋಟ: 73 ಸಾವು
ಪೆಟ್ರೋಲ್ ಬಂಕ್‌ನಲ್ಲಿ ಸ್ಫೋಟ: 73 ಸಾವು   

ಅಕ್ರಾ, ಘಾನಾ (ಎಪಿ): ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಘಾನಾದ ರಾಜಧಾನಿ ಅಕ್ರಾದ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಗುರುವಾರ ಸಂಭವಿಸಿದ ಸ್ಫೋಟದ ಪರಿಣಾಮ ಸ್ಟೇಷನ್‌ನಲ್ಲಿ ಆಶ್ರಯ ಪಡೆದಿದ್ದ 73 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಸುಟ್ಟು, ಬೆಂದು ಕರಕಲಾಗಿರುವ ದೇಹಗಳ ನಡುವೆ ಚೆಲ್ಲಾ‍ಪಿಲ್ಲಿಯಾಗಿರುವ ವಸ್ತುಗಳು, ಇನ್ನೂ ಹೊತ್ತಿ ಉರಿಯುತ್ತಿರುವ ಕಟ್ಟಡಗಳಿಂದಾಗಿ ಇಡೀ ಪ್ರದೇಶವೇ ಭೀಕರವಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳಿವೆ.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಮಳೆ ಮತ್ತು ಪ್ರವಾಹದಿಂದ ರಕ್ಷಣೆ ಪಡೆಯಲು ನೂರಾರು ಮಂದಿ ಬುಧವಾರ ರಾತ್ರಿಯಿಂದಲೇ ಅಲ್ಲಿ ಆಶ್ರಯ ಪಡೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ತನಿಖೆಯೂ ಆರಂಭವಾಗಿದೆ ಎಂದು ಘಾನಾ ಅಗ್ನಿ ಸೇವೆಗಳ ವಕ್ತಾರ ಬಿಲ್ಲಿ ಅನಾಲ್ಗೇಟ್‌ ಅವರು ಹೇಳಿದರು.

ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ಆವರಿಸಿಕೊಂಡ ಪರಿಣಾಮ ಅವು ಸುಟ್ಟು ಕುಸಿದುಬೀಳುತ್ತಿರುವ ಕಾರಣ ಮಳೆ ನೀರು ನುಗ್ಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.