ADVERTISEMENT

ಪೋರನ ಚಿತ್ರ ರೂ.13 ಕೋಟಿಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿ ಹತ್ತು ವರ್ಷದ ಬಾಲಕನೊಬ್ಬ ಬಿಡಿಸಿದ ಚಿತ್ರ ಕಲಾಕೃತಿ 15 ಲಕ್ಷ ಪೌಂಡ್‌ಗಳಿಗೆ (ರೂ. 13.58 ಕೋಟಿ) ಮಾರಾಟವಾಗಿದೆ.

ಬಳಿಕ ಇದೇ ಕಲಾಕೃತಿಯ ಬೆಲೆ 20 ನಿಮಿಷಗಳ ಅಂತರದಲ್ಲಿ 2.50  ಲಕ್ಷ  ಪೌಂಡ್‌ಗೆ  (ರೂ.22.64 ಕೋಟಿ) ಬಿಕರಿಯಾಗಿದೆ. ಇಲ್ಲಿನ ಪ್ರಾಥಮಿಕ ಕಲಾ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಕಿರೊನ್ ವಿಲಿಯಂಸನ್ಸ್ ಅವರ ಡಜನ್‌ಗೂ ಹೆಚ್ಚಿನ ಕಲಾಕೃತಿಗಳು ಈ ವಾರಾಂತ್ಯದಲ್ಲಿ ಒಂದು ಲಕ್ಷ ಪೌಂಡ್‌ಗೆ (ರೂ. 90 ಲಕ್ಷ  ) ಮಾರಾಟವಾಗುವ ಸಾಧ್ಯತೆ ಇದೆ.

ಕಳೆದ ವಾರ ಕಿರೊನ್ ಅವರ 23 ಚಿತ್ರಗಳು 2.42 ಲಕ್ಷ ಪೌಂಡ್‌ಗೆ (ರೂ. 21.91 ಕೋಟಿ) ಮಾರಾಟವಾಗಿದ್ದವು. ಆದರೆ, ಅವರ ನೂತನ ಕಲಾಕೃತಿಗೆ ಕೇವಲ 20 ನಿಮಿಷದ ಅಂತರದಲ್ಲಿ ಇಮೇಲ್ ಮತ್ತು ದೂರವಾಣಿ ಕರೆಗಳ ಮೂಲಕ ಭಾರಿ ಬೇಡಿಕೆಯೊಂದಿಗೆ ರೂ. 13.58 ಕೋಟಿಗೆ ಮಾರಾಟವಾಗಿದ್ದು ವಿಶೇಷ.

ಕಿರೊನ್ ಬಿಡಿಸಿದ ಜಲಚಿತ್ರವೊಂದು ಅತಿ ಕಡಿಮೆ ಬೆಲೆಗೆ 2,450 ಪೌಂಡ್‌ಗೆ (ರೂ. 19.6 ಲಕ್ಷ ) ಮಾರಾಟವಾಗಿದೆ ಎಂದು `ದಿ ಸನ್' ಪತ್ರಿಕೆ ವರದಿ ಮಾಡಿದೆ. `ಕಿರೊನ್‌ಗೆ ಚಿತ್ರ ಬಿಡಿಸುವುದೆಂದರೆ ಇಷ್ಟ ಹೊರತು ದುಡ್ಡಿಗಾಗಿ ಮಾಡುತ್ತಿಲ್ಲ' ಎಂದು ಅವರ ತಂದೆ ಹೇಳಿದ್ದಾರೆ.

`ಐದನೇ ವಯಸ್ಸಿನಲ್ಲಿಯೇ ಕಿರೊನ್ ಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದ. ಈತ ಬಿಡಿಸಿದ ಮೊದಲ 19 ಚಿತ್ರಗಳು 2009ರಲ್ಲಿ 14,000 ಪೌಂಡ್‌ಗೆ ( ರೂ. 11.2 ಲಕ್ಷ ) ಮಾರಾಟಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.