ADVERTISEMENT

ಪ್ರತಿಕ್ರಿಯೆ: ಸೋನಿಯಾಗೆ ಕೋರ್ಟ್‌ ಗಡುವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST
ಸೋನಿಯಾ ಗಾಂಧಿ   –ಸಂಗ್ರಹ ಚಿತ್ರ
ಸೋನಿಯಾ ಗಾಂಧಿ –ಸಂಗ್ರಹ ಚಿತ್ರ   

ನ್ಯೂಯಾರ್ಕ್‌ (ಐಎಎನ್‌ಎಸ್‌): ಸಿಖ್ಖರ ಹತ್ಯಾಕಾಂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅಮೆರಿಕದ ಕೋರ್ಟ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪ್ರತಿಕ್ರಿಯೆ ದಾಖಲಿಸಲು ಜನವರಿ 2ರವರೆಗೆ ಗಡುವು ನೀಡಿ ನೋಟಿಸ್‌ ಜಾರಿ ಮಾಡಿದೆ.

‘1984ರ ನಡೆದ ಈ ಪ್ರಕರಣದಲ್ಲಿ ಭಾಗಿಯಾಗಿ ದ್ದಾರೆಂದು ಆಪಾದಿಸಲಾಗಿರುವ ಪಕ್ಷದ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿದೆ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ದಂಡನೆ ಯಿಂದ ವಿನಾಯ್ತಿ ನೀಡಿ, ಬಡ್ತಿ ಕೊಡ ಲಾಗಿದೆ’ ಎಂದು ‘ನ್ಯಾಯಕ್ಕಾಗಿ ಸಿಖ್ಖರು’ (ಎಸ್‌ಎಫ್‌ಜೆ) ಸಂಘಟನೆ ಅರ್ಜಿಯಲ್ಲಿ ದೂರಿದೆ.

‘ಈ ಪ್ರಕರಣದ ಆರೋಪಿಗಳನ್ನು   ಸೋನಿಯಾ ಅವರು ಇಚ್ಛಾಪೂರ್ವಕವಾಗಿ ರಕ್ಷಿಸುತ್ತಿದ್ದಾರೆ. ಅವರ ಈ ವರ್ತನೆಯು ದುರುದ್ದೇಶ ದಿಂದ ಕೂಡಿದೆ. ಇದರಿಂದಾಗಿ ಈ ಹತ್ಯಾಕಾಂಡದ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಆದ್ದರಿಂದ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು’ 38 ಪುಟಗಳ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.