ಕೊಲಂಬೊ (ಪಿಟಿಐ): ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್ ಹತ್ಯೆಯಾದ ಮತ್ತು ಆ ಸಂಘಟನೆಯ ಎಲ್ಲಾ ಚಟುವಟಿಕೆಗಳು ಅಂತ್ಯ ಕಂಡ ಸ್ಥಳವಾದ ನಂತಿಕಂಡಲ್ ಮರಳುದಿಬ್ಬ ಇರುವ ಪ್ರದೇಶವನ್ನು ಸಾರ್ವಜನಿಕರ ಪ್ರವೇಶಕ್ಕೆ ಶ್ರೀಲಂಕಾ ಸರ್ಕಾರ ಮುಕ್ತಗೊಳಿಸಿದೆ.
ಶ್ರೀಲಂಕಾದ ಮುಲ್ಲೈತಿವು ಜಿಲ್ಲೆಯಲ್ಲಿರುವ ಮರಳು ದಿಬ್ಬದಲ್ಲಿ 2009ರ ಮೇ 18ರಂದು ಎಲ್‌ಟಿಟಿಇ ಮುಖ್ಯಸ್ಥ ವಿ. ಪ್ರಭಾಕರ್‌ನ ಶವ ಪತ್ತೆಯಾಗಿತ್ತು.
ಈ ಪ್ರದೇಶದಲ್ಲಿ ಹುದುಗಿಸಲಾಗಿದ್ದ ಸ್ಫೋಟಕಗಳು ಹಾಗೂ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ವಿಳಂಬವಾಯಿತು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.