ಹೂಸ್ಟನ್ (ಪಿಟಿಐ): ಫೇಸ್‌ಬುಕ್ ತನ್ನ ಬಳಕೆದಾರರಿಗೆ ‘ಲೈಕ್’ ಆಯ್ಕೆಗೆ ಪರ್ಯಾಯವಾಗಿ ‘ಸಹಾನುಭೂತಿ’ ಅಥವಾ ‘ಸಂತಾಪ’ (sympathise) ಸೂಚಿಸುವ ಗುಂಡಿ (button) ನೀಡಲು ಚಿಂತನೆ ನಡೆಸುತ್ತಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೆಲವರು ದುಃಖಕರ ವಿಷಯಗಳನ್ನು ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ಕುಟುಂಬ ಸದಸ್ಯರ ನಿಧನ ಅಥವಾ ಇನ್ಯಾವುದೇ ರೀತಿಯ ಅಹಿತಕರ ಘಟನೆಗಳ ಬಗ್ಗೆ ತಿಳಿಸುತ್ತಾರೆ. ಆ ಘಟನೆ ಅಥವಾ ಅವರ ಬಗ್ಗೆ ಕಾಳಜಿ ತೋರುವ ಬಯಕೆ ಕೆಲವರಲ್ಲಿ ಇರುತ್ತದೆ. ಆದರೆ, ಅದನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ತಿಳಿದಿರುವುದಿಲ್ಲ. ಸದ್ಯ ಫೇಸ್‌ಬುಕ್‌ನಲ್ಲಿ ಸೀಮಿತ ಆಯ್ಕೆಗಳು ಇರುವುದರಿಂದ ಕೆಲವರು ಅನಿವಾರ್ಯವಾಗಿ ‘ಲೈಕ್’ ಗುಂಡಿ ಒತ್ತುತ್ತಿದ್ದಾರೆ.
ಕೆಲವೊಮ್ಮೆ ತಿಳಿದೋ ತಿಳಿಯದೇ ‘ಲೈಕ್’ ಗುಂಡಿ ಒತ್ತುತ್ತಾರೆ. ಈ ಕುರಿತು ಪ್ರಶ್ನಿಸಿದರೆ, ‘ನಾನು ಸಹಾನುಭೂತಿ ವ್ಯಕ್ತಪಡಿಸಲು ಪ್ರಯತ್ನಿಸಿದ್ದೆ. ಆದರೆ, ‘ಲೈಕ್’ ಹೊರತುಪಡಿಸಿ ಬೇರೆ ಆಯ್ಕೆಗಳಿರಲಿಲ್ಲ’ ಎಂದು ಉತ್ತರಿಸಿದ್ದಾರೆ. ‘ಸಹಾನುಭೂತಿ’ ಗುಂಡಿ ಅಳವಡಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಫೇಸ್‌ಬುಕ್ ಎಂಜಿನಿಯರ್ರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.