
ಪ್ರಜಾವಾಣಿ ವಾರ್ತೆವಾಷಿಂಗ್ಟನ್(ಪಿಟಿಐ): ತಂದೆಗೆ ಬರಬೇಕಿದ್ದ 80,000 ಡಾಲರ್ (ಸುಮಾರು 49ಲಕ್ಷ ರೂಪಾಯಿ) ಪರಿಹಾರದ ವಿವರವನ್ನು ಪುತ್ರಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರಿಂದ ಆ ಪರಿಹಾರದ ಮೊತ್ತ ರದ್ದುಗೊಂಡ ಘಟನೆ ಅಮೆರಿಕದಲ್ಲಿ ನಡೆದಿದೆ.
ಫ್ಲಾರಿಡಾದ ಗಲಿವರ್ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪ್ಯಾಟ್ರಿಕ್ ಸ್ನೆ (69) ಅವರಿಗೆ ವಯಸ್ಸಿನ ತಾರತಮ್ಯದ ಪ್ರಕರಣದಲ್ಲಿ, ಶಾಲೆ ಹಣ ಪಾವತಿಸುವ ಕುರಿತು ರಹಸ್ಯ ಮಾತುಕತೆ ನಡೆದಿತ್ತು. ಸ್ನೆ ಪುತ್ರಿ ಡಾನಾ ಫೇಸ್‌ಬುಕ್‌ನಲ್ಲಿ ಈ ವಿವರ ಪ್ರಕಟಿಸಿದ್ದಳು. ಒಪ್ಪಂದವನ್ನು ಬಹಿರಂಗಪಡಿಸಿರುವುದರ ವಿರುದ್ಧ ಶಾಲೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಕೋರ್ಟ್ ಈಗ ಪರಿಹಾರ ರದ್ದುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.