ADVERTISEMENT

ಬರಲಿದೆ ಮಾತನಾಡುವ ಕಾರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 17:35 IST
Last Updated 7 ಮಾರ್ಚ್ 2011, 17:35 IST

ಲಂಡನ್(ಪಿಟಐ):  ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ, ವಿಳಾಸ ಮರೆತು ದಾರಿತಪ್ಪಿದರೆ ಚಾಲಕ ಪಡುವ ಬಾಧೆ ಅಷ್ಟಿಷ್ಟಲ್ಲ. ಇಂತಹ ಸಮಸ್ಯೆಗಳನ್ನು ದೂರವಾಗಿಸುವ ಸಲುವಾಗಿ ಮಾತನಾಡುವ ಕಾರನ್ನು ವಿಜ್ಞಾನಿಗಳು ಕಂಡು  ಹಿಡಿದ್ದಾರೆ.

ಹೋಗುತ್ತಿರುವ ದಾರಿ ಸರಿಯೇ ? ಮುಂದಿನ ಪೆಟ್ರೋಲ್ ಬಂಕ್ ಎಲ್ಲಿದೆ? ಶೌಚಾಲಯ ಎಲ್ಲಿದೆ ? ಯಾವ ಮಾರ್ಗದಲ್ಲಿ ಹೋದರೆ ವಾಹನ ಸಂಚಾರ ಕಡಿಮೆ ಇದೆ ಇಂತಹ  ಪ್ರಶ್ನೆಗಳಿಗೆ 19 ಭಾಷೆಗಳಲ್ಲಿ ಉತ್ತರಿಸಬಲ್ಲ ‘ಸಿಂಕ್’ ಹೆಸರಿನ ಕಾರನ್ನು  ಫೋರ್ಡ್ ಕಂಪೆನಿಯು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ‘ಡೇಲಿ ಮೇಲ್’ ಪತ್ರಿಕೆ ವರದಿ ಮಾಡಿದೆ.

ಕೇವಲ ಕಲ್ಪನೆಗಷ್ಟೇ ಸೀಮಿತವಾಗಿದ್ದ ಧ್ವನಿ ಆದೇಶ ನಿರ್ವಹಣಾ ಕಾರು (ವಾಯ್ಸಿ ಆಪರೇಟಿಂಗ್ ಡಿವೈಸ್ ಕಾರು) ಮುಂದಿನ ವರ್ಷ ಬ್ರಿಟನ್ ರಸ್ತೆಗಳಲ್ಲಿ ಸಂಚರಿಸಲಿದೆ. ವೃದ್ಧರು ಸಹ ಇನ್ನು ಮುಂದೆ ಸುಲಲಿತವಾಗಿ ಕಾರು ಚಾಲನೆ ಮಾಡಬಹುದಾಗಿದೆ.

ಚಾಲಕನ ಧ್ವನಿ ಆದೇಶಗಳು ಕಾರು ಹಾಗೂ ತಂತ್ರಾಂಶ ಎರಡನ್ನು ನಿರ್ವಹಣೆ ಮಾಡಲಿದೆ. ಈ ತಂತ್ರಜ್ಞಾನ ಯೂರೋಪ್ ಕಾರು ಬಳಕೆದಾರರಿಗೆಂದೇ ಅಭಿವೃದ್ಧಿಪಡಿಸಲಾಗಿದೆ ಎಂದು ಫೋರ್ಡ್ ಕಂಪೆನಿಯ ಎಂಜಿನಿಯರ್ ಜಾಸನ್ ಜಾನ್ಸನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.