ADVERTISEMENT

ಬಸ್ ಮಗುಚಿ ಅಪಘಾತ:ಇಬ್ಬರು ಭಾರತೀಯರ ಸಾವು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಕ್ವಾಲಾಲಂಪುರ (ಐಎಎನ್‌ಎಸ್):  ಭಾರತೀಯರಿರುವ ಪ್ರವಾಸಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು 22 ಜನ ಗಾಯಗೊಂಡಿದ್ದಾರೆ.

ಮಲೇಷ್ಯಾದ ಪಹಾಂಗ್ ರಾಜ್ಯದಲ್ಲಿರುವ ಜೆಂಟಿಂಗ್ ಹೈಲ್ಯಾಂಡ್ಸ್ ರೆಸಾರ್ಟ್‌ನಿಂದ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರಲ್ಲಿ ಒಬ್ಬರು ಮಹಿಳೆಯೂ (50) ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ವಿಭಜಕಕ್ಕೆ ಬಸ್ಸು ಡಿಕ್ಕಿ ಹೊಡೆದು ಮುಂದಿದ್ದ ಕಿರಿದಾದ ಕಣಿವೆಯಲ್ಲಿ ಮಗುಚಿಬಿದ್ದಿದೆ.  ಚಾಲಕರಿಬ್ಬರೂ ತೀವ್ರವಾಗಿ ಗಾಯಗೊಂಡ್ದ್ದಿದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಯುಸ್ರಿ ಹಸನ್ ಬಸ್ರಿ ಅವರು ತಿಳಿಸಿದ್ದಾರೆ.ಪ್ರವಾಸಿಗರೆಲ್ಲರೂ ಪಂಜಾಬ್‌ಗೆ ಸೇರಿದವರು ಎಂದು `ದ ಸ್ಟಾರ್ ಆನ್‌ಲೈನ್~ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.