ADVERTISEMENT

ಬಾಂಗ್ಲಾ ಪ್ರವಾಸ: ಪ್ರಧಾನಿಗೆ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:00 IST
Last Updated 15 ಸೆಪ್ಟೆಂಬರ್ 2011, 6:00 IST

ಸಿಂಗಪುರ (ಪಿಟಿಐ): ಸದಾ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗುವ ಪ್ರಧಾನಿ ಮನಮೋಹನ್ ಸಿಂಗ್, ಅಪರೂಪಕ್ಕೆಂಬಂತೆ ತಮ್ಮ ಬಾಂಗ್ಲಾ ದೇಶದ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.

`ಅದೊಂದು ಅತ್ಯಂತ ಉತ್ತಮ ಕಾರ್ಯ. ಎರಡೂ ರಾಷ್ಟ್ರಗಳ ಸಂಬಂಧ ಬಲಗೊಂಡಿದೆ. ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನಿ ತಮ್ಮ ಜೊತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಜೊತೆಯಲ್ಲಿ ಕರೆದೊಯ್ದಿದ್ದರೆ ಇನ್ನೂ ಚೆನ್ನಾಗಿತ್ತು~ ಎಂದು ಸುಷ್ಮಾ ಬುಧವಾರ ಹೇಳಿದ್ದಾರೆ.

`ಭಾರತದ ವಿದೇಶಾಂಗ ನೀತಿ ಪ್ರಾದೇಶಿಕ ಸಹಕಾರಕ್ಕೆ ಉತ್ತಮವಾಗಿದೆ. ದೇಶದ ಹಿತಾಸಕ್ತಿಗೆ ಪೂರಕವಾಗಿ ಕೇಂದ್ರ ಸರ್ಕಾರ ಅದನ್ನು ರೂಪಿಸಿದೆ~ ಎಂದಿರುವ ಅವರು, `ಚೀನಾದ ಜೊತೆಗಿನ ಸಂಬಂಧವನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕು~ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕಿಯಾಗಿ ಇದೇ ಮೊದಲ ಬಾರಿ ಇಲ್ಲಿಗೆ ಅಧಿಕೃತ ಭೇಟಿ ನೀಡಿರುವ ಸುಷ್ಮಾ, ಪ್ರಧಾನಿ ಲೀ ಸಿನ್ ಲೂಂಗ್ ಹಾಗೂ ವಿದೇಶಾಂಗ ಸಚಿವ ಕೆ.ಷಣ್ಮುಗಂ ಅವರನ್ನು ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.