ADVERTISEMENT

`ಬಾರ್‌ಕೋಡ್' ಸಂಶೋಧಕ ನಿಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ನ್ಯೂಯಾರ್ಕ್ (ಪಿಟಿಐ): ಆರು ದಶಕಗಳ ಹಿಂದೆ `ಬಾರ್‌ಕೋಡ್' ಆವಿಷ್ಕಾರಿಸಿ ಉತ್ಪನ್ನಗಳ ಮೇಲೆ ಲೇಬಲ್ ಹಚ್ಚಲು ಸುಲಭದ ದಾರಿ ಹುಡುಕಿಕೊಟಿದ್ದ ಎಂಜಿನಿಯರ್ ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್ (91) ಇತ್ತೀಚೆಗೆ ನಿಧನ ಹೊಂದಿದ್ದಾರೆ.

ನ್ಯೂಜೆರ್ಸಿಯ ಎಜ್‌ವಾಟರ್‌ನಲ್ಲಿ ವಾಸವಿದ್ದ ನಾರ್ಮನ್ ಅವರು ಅಲ್ಜೈಮರ್ ರೋಗದಿಂದ ಬಳಲುತ್ತಿದ್ದರು. ವಯೋ ಸಹಜ ಅನಾರೋಗ್ಯವೂ ಅವರ ಸಾವಿಗೆ ಕಾರಣವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ ವರದಿ ಮಾಡಿದೆ.
ನಾರ್ಮನ್ ಅವರ ಸಾವಿನ ಸುದ್ದಿಯನ್ನು ಅವರ ಮಗಳು ಸೂಸಾನ್ ವುಡ್‌ಲ್ಯಾಂಡ್ ಗುರುವಾರ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.