ಲಂಡನ್ (ಐಎಎನ್‌ಎಸ್): ಬೊಜ್ಜು ಕರಗಿಸುವುದಕ್ಕಷ್ಟೇ ವ್ಯಾಯಾಮ ಅವಶ್ಯಕ ಎಂದು ಅನೇಕರು ತಿಳಿದಿರುತ್ತಾರೆ. ಆದರೆ ಬೆವರಿಳಿಯುವಂತಹ ಚಟುವಟಿಕೆ ಮಾಡುವುದರಿಂದ ಜ್ವರ ಮತ್ತು ಜ್ವರದಿಂದಾಗುವ ನಿಶ್ಯಕ್ತಿ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಹೆಚ್ಚು ಶ್ರಮಭರಿತ ವ್ಯಾಯಾಮಗಳಾದ ಓಟ, ಸೈಕ್ಲಿಂಗ್ ಮತ್ತು ಬಿರುಸಿನ ನಡೆದಾಟಗಳನ್ನು ಮಾಡುವುದರಿಂದ ಜ್ವರವನ್ನು ತಡೆಗಟ್ಟಬಹುದು ಎಂದು ಈ ಕುರಿತು ಅಧ್ಯಯನ ನಡೆಸಿದ ‘ಲಂಡನ್ ಸ್ಕೂಲ್ ಆಫ್ ಹೈಜೆನ್ ಎಂಡ್ ಮೆಡಿಸಿನ್’ನಲ್ಲಿನ ತಜ್ಞರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ವೈರಲ್ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಈ ಸಂಬಂಧ ಕಳೆದ ವರ್ಷ ನಡೆಸಿದ ಸಮೀಕ್ಷೆ ಪ್ರಕಾರ ಜ್ವರದಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ.
ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕೆ ವ್ಯಾಯಮದ ಬಗ್ಗೆ ಅರಿವು ಮೂಡಿರುವುದೇ ಕಾರಣ ಎಂದು ಸಂಶೋಧಕ ಆಲ್ಮಾ ಅಡ್ಲರ್ ಹೇಳಿದ್ದಾರೆ.