ADVERTISEMENT

ಬೆಂಕಿ ಹತ್ತಿಕೊಂಡ ಕಾರಿನಲ್ಲಿದ್ದ ಭಾರತೀಯ ಮಹಿಳೆ ಸಾವು

ಪಿಟಿಐ
Published 16 ಅಕ್ಟೋಬರ್ 2017, 4:18 IST
Last Updated 16 ಅಕ್ಟೋಬರ್ 2017, 4:18 IST
ಹರ್ಲೀನ್‌ ಗ್ರೆವಾಲ್‌
ಹರ್ಲೀನ್‌ ಗ್ರೆವಾಲ್‌   

ನ್ಯೂಯಾರ್ಕ್‌: 25 ವರ್ಷ ವಯಸ್ಸಿನ ಭಾರತೀಯ ಸಂಜಾತೆ ಹರ್ಲೀನ್‌ ಗ್ರೆವಾಲ್‌ ಕಾರು ಅಪಘಾತದ ನಂತರ ಉಂಟಾದ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.

ಆಕೆ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರನ್ನು 23 ವರ್ಷದ ಸಯೀದ್‌ ಅಹಮದ್‌ ಓಡಿಸುತ್ತಿದ್ದ. ವೇಗವಾಗಿ ಬಂದ ಕಾರು ‘ಬ್ರೂಕ್ಲಿನ್‌ ಕ್ವೀನ್ಸ್‌ ಎಕ್ಸ್‌ಪ್ರೆಸ್‌ ವೇ’ಯ ಕಾಂಕ್ರೀಟ್‌ ತಡೆಗೋಡೆಗೆ ಗುದ್ದಿದಾಗ ಬೆಂಕಿ ಹತ್ತಿಕೊಂಡಿದೆ. ಹರ್ಲೀನ್‌ ಅವರನ್ನು ರಕ್ಷಿಸುವ ಪ್ರಯತ್ನವನ್ನು ಚಾಲಕ ಮಾಡಿಲ್ಲ ಎಂದು ನ್ಯೂಯಾರ್ಕ್‌ ಡೈಲಿ ವರದಿ ಮಾಡಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸುವ ವೇಳೆಗೆ ಹರ್ಲೀಮ್‌ ಮೃತಪಟ್ಟಿದ್ದರು. ಚಾಲಕ ಪರಾರಿಯಾಗಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದಾನೆ. ಆತನ ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾಗಿತ್ತು ಎಂದು ವರದಿ ಹೇಳಿದೆ. ಚಾಲಕನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.