ADVERTISEMENT

ಬ್ರಿಟನ್: ನೂರ್ ಖಾನ್ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 19:30 IST
Last Updated 9 ನವೆಂಬರ್ 2012, 19:30 IST

ಲಂಡನ್: ಎರಡನೇ ಮಹಾ ಯುದ್ಧದದಲ್ಲಿ ಬ್ರಿಟನ್ನಿನ ಗೂಢಚಾರಣಿಯಾಗಿ ಕಾರ್ಯನಿರ್ವಹಿಸಿದ್ದ, ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಪುತ್ಥಳಿಯನ್ನು ರಾಣಿ ಆ್ಯನ್ ಅವರು ಲಂಡನ್ ನಗರದ  ಗೋರ್ಡನ್ ಸ್ಕ್ವೇರ್ ಗಾರ್ಡನ್ಸ್‌ನಲ್ಲಿ ಅನಾವರಣ ಮಾಡಿದರು.

ನೂರ್ ಇನಾಯತ್ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ಬ್ರಿಟನ್‌ನ ರಹಸ್ಯ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.

ಬ್ರಿಟನ್ನಿನ ವಿಶೇಷ ಕಾರ್ಯಾಚರಣೆಗಳ ಕಾರ್ಯಕಾರಿಯು (ಎಸ್‌ಒಇ) ನೂರ್ ಅವರನ್ನು ಏಜೆಂಟ್ ಆಗಿ ನೇಮಕ ಮಾಡುವುದಕ್ಕಿಂತಲೂ ಮೊದಲು, ಅವರು ಮಹಿಳೆಯರ ಸಹಾಯಕ ವಾಯು ಪಡೆಯಲ್ಲಿ ರೇಡಿಯೊ ನಿರ್ವಾಹಕರಾಗಿದ್ದರು.

ನೂರ್ ಅವರನ್ನು ಡಚವುನ ರಾಜಕೀಯ ಕೈದಿಗಳ ಶಿಬಿರದಲ್ಲಿ 1944ರಲ್ಲಿ ಹತ್ಯೆ ಮಾಡಲಾಗಿತ್ತು. ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು.

`ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಬ್ರಿಟನ್‌ಗಾಗಿ ಜೀವತೆತ್ತ ಎರಡನೇ ಮಹಾಯುದ್ಧದ ನಾಯಕಿ, ಭಾರತೀಯ ಮೂಲದ ಯುವ ಮಹಿಳೆ ನೂರ್ ಇನಾಯತ್ ಖಾನ್ ಗೌರವಾರ್ಥ ಅವರ ಪುತ್ಥಳಿಯನ್ನು  ಈ ಚೌಕದಲ್ಲಿ ಅನಾವರಣ ಮಾಡಲಾಗಿದೆ~ ಎಂದು ನೂರ್ ಇನಾಯತ್ ಖಾನ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ `ಸ್ಪೈ ಪ್ರಿನ್ಸೆಸ್, ದ ಲೈಫ್ ಆಫ್ ನೂರ್ ಇನಾಯತ್ ಖಾನ್~ ಪುಸ್ತಕದ ಲೇಖಕರಾದ ಶರ್ಬಾನಿ ಬಸು ಹೇಳಿದ್ದಾರೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT