ನಯ್ ಪೈ ತಾವ್, ಮ್ಯಾನ್ಮಾರ್ (ಪಿಟಿಐ): ಬೆಳೆಯುತ್ತಿರುವ ಭಯೋತ್ಪಾದನಾ ಆತಂಕ, ಸಾಗರಾತೀತ ಅಪರಾಧಗಳು ಹಾಗೂ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ‘ಜಂಟಿ ಹೋರಾಟ’ ನಡೆಸಲು ಬಿಮ್‌ಸ್ಟೆಕ್ (ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ) ಶೃಂಗ ಸಭೆಯಲ್ಲಿ ಏಳು ರಾಷ್ಟ್ರಗಳ ನಾಯಕರು ಒಕ್ಕೊರಲ ದನಿ ಎತ್ತಿದ್ದಾರೆ.
ಅಲ್ಲದೇ, ವ್ಯಾಪಾರ, ಇಂಧನ ಹಾಗೂ ಪರಿಸರ ಸಂಬಂಧಿ ಕ್ಷೇತ್ರಗಳಲ್ಲಿ ಪರಸ್ಪರ ಸಂಪರ್ಕ ಹಾಗೂ ಸಹಕಾರವನ್ನು ವರ್ಧಿಸುವ ಪ್ರಯತ್ನವನ್ನು ತೀವ್ರಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಇಲ್ಲಿ ನಡೆದ ಮೂರನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ಭೂತಾನ್ ಹಾಗೂ ನೇಪಾಳ ರಾಷ್ಟ್ರ ನಾಯಕರು ಸಭೆ ನಡೆಸಿದರು. ಶಾಂತಿ, ಸ್ಥಿರತೆ ಹಾಗೂ ಆರ್ಥಿಕ ವೃದ್ಧಿಗೆ ಭಯೋತ್ಪಾದನೆಯು ಆತಂಕ ತಂದೊಡ್ಡಿದೆ ಎಂದು ಮನಗಂಡ ನಾಯಕರು, ಎಲ್ಲಾ ವಿಧದ ಭಯೋತ್ಪಾದನೆ ಹಾಗೂ ರಾಷ್ಟ್ರಾತೀತ ಅಪರಾಧಗಳ ಕಾರ್ಯಾಚರಣೆಯಲ್ಲಿ ಸಂಪೂರ್ಣ ಸಹಕಾರ ನೀಡಲು ಒಪ್ಪಿಕೊಂಡಿರುವುದಾಗಿ ಸಭೆ ಬಳಿಕ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.