ವಾಷಿಂಗ್ಟನ್ (ಐಎಎನ್‌ಎಸ್): ‘ಆಫ್ಘಾನಿಸ್ತಾನ ಭಯೋತ್ಪಾದನೆಯ ತಾಣವಲ್ಲ ಎಂಬುದನ್ನು ವಿಶ್ವ ಮನವರಿಕೆ ಮಾಡಿಕೊಳ್ಳಬೇಕು’ ಎಂದು ಅಲ್ಲಿನ ಅಧ್ಯಕ್ಷ ಹಮೀದ್ ಕರ್ಜೈ ಸೋಮವಾರ ಹೇಳಿದ್ದಾರೆ.
‘ಅಂತರರಾಷ್ಟ್ರೀಯ ಪಡೆಗಳು ಆಫ್ಘನ್ನರ ನಿಜವಾದ ಮಿತ್ರರಾಗಿದ್ದರೆ, ಕಳೆದ ಕೆಲವು ವರ್ಷಗಳಿಂದ ಪ್ರತಿದಿನ ನಡೆಯುತ್ತಿದ್ದ ಆಫ್ಘನ್ನಿನ ಅಮಾಯಕ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಹತ್ಯೆ ಒಳ್ಳೆಯ ಉದ್ದೇಶವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬುದು ಲಾಡೆನ್ ಹತ್ಯೆಯಿಂದ ಸಾಬೀತಾಗಿದೆ. ಆತನ ಹತ್ಯೆ ಆಫ್ಘಾನಿಸ್ತಾನದ ಜನತೆಗೆ ನೆಮ್ಮದಿ ತಂದಿದೆ. ಇದು ಅಲ್ ಖೈದಾ ಮತ್ತಿತರ ಸಂಘಟನೆಗಳು ಇಲ್ಲಿ ನೆಲೆಯೂರಿಲ್ಲ ಎಂಬುದನ್ನು ದೃಢಪಡಿಸಿದೆ’ ಎಂದು ಅಲ್ಲಿನ ವಿರೋಧ ಪಕ್ಷದ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.