ADVERTISEMENT

ಭಯೋತ್ಪಾದನೆ ನಿಗ್ರಹ, ಹವಾಮಾನ ವೈಪರೀತ್ಯ ತಡೆಗೆ ಭಾರತ– ಫ್ರಾನ್ಸ್‌ ಒಗ್ಗೂಡಿ ಹೋರಾಟ: ಮೋದಿ

ಏಜೆನ್ಸೀಸ್
Published 3 ಜೂನ್ 2017, 13:30 IST
Last Updated 3 ಜೂನ್ 2017, 13:30 IST
ಭಯೋತ್ಪಾದನೆ ನಿಗ್ರಹ, ಹವಾಮಾನ ವೈಪರೀತ್ಯ ತಡೆಗೆ ಭಾರತ– ಫ್ರಾನ್ಸ್‌ ಒಗ್ಗೂಡಿ ಹೋರಾಟ: ಮೋದಿ
ಭಯೋತ್ಪಾದನೆ ನಿಗ್ರಹ, ಹವಾಮಾನ ವೈಪರೀತ್ಯ ತಡೆಗೆ ಭಾರತ– ಫ್ರಾನ್ಸ್‌ ಒಗ್ಗೂಡಿ ಹೋರಾಟ: ಮೋದಿ   

ಪ್ಯಾರಿಸ್‌: ಭಯೋತ್ಪಾದನೆ ನಿಗ್ರಹ ಹಾಗೂ ಹವಾಮಾನ ವೈಪರೀತ್ಯ ವಿಚಾರಗಳಲ್ಲಿ ಭಾರತ ಮತ್ತು ಫ್ರಾನ್ಸ್‌ ಜೊತೆಗೂಡಿ ಹೋರಾಡುವ ಅಗತ್ಯವಿದೆ ಎಂದು ಫ್ರಾನ್ಸ್‌ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್‌ ಅವರೊಂದಿಗೆ ಶನಿವಾರ ನಡೆದ ಮಾತುಕತೆ ವೇಳೆ ಮೋದಿ ಈ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

‘ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಫ್ರಾನ್ಸ್‌ನ ಸಂಪೂರ್ಣ ಸಹಕಾರವಿದೆ’ ಎಂದು ಎಮ್ಯಾನುಯಲ್ ಮ್ಯಾಕ್ರನ್‌ ತಿಳಿಸಿದ್ದಾರೆ.

ADVERTISEMENT

‘ಹವಾಮಾನ ವೈಪರೀತ್ಯ ತಡೆಗೆ ಫ್ರಾನ್ಸ್‌ ಬದ್ಧವಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಫ್ರಾನ್ಸ್‌ ಜಾರಿಗೆ ತರುತ್ತಿದೆ’ ಎಂದು ಮ್ಯಾಕ್ರನ್‌ ಹೇಳಿದ್ದಾರೆ.

‘ಫ್ರಾನ್ಸ್‌ ಸ್ವಾತಂತ್ರ್ಯಕ್ಕಾಗಿ ಭಾರತೀಯ ಯೋಧರ ಬಲಿದಾನ’
‘ಫ್ರಾನ್ಸ್‌ನ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಭಾರತೀಯ ಯೋಧರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಭಾರತದೊಂದಿಗೆ ಫ್ರಾನ್ಸ್‌ ಹೊಂದಿರುವ ಗಟ್ಟಿ ನಂಟಿಕೆ ಇದೇ ಸಾಕ್ಷಿ’ ಎಂದು ಮ್ಯಾಕ್ರನ್‌ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.