ADVERTISEMENT

‘ಭಯೋತ್ಪಾದನೆ ವಿರುದ್ಧ ಭಾರತ– ಇಸ್ರೇಲ್‌ ಜಂಟಿ ಹೋರಾಟ’

ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳು ‘ವಿಶೇಷ’ ಎಂದ ಮೋದಿ

ಏಜೆನ್ಸೀಸ್
Published 3 ಜುಲೈ 2017, 17:35 IST
Last Updated 3 ಜುಲೈ 2017, 17:35 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಜೆರುಸಲೆಂ: ಇಸ್ರೇಲ್‌ ಜತೆಗಿನ ಭಾರತದ ಒಪ್ಪಂದಗಳನ್ನು ‘ವಿಶೇಷ’ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧ ಉಭಯರಾಷ್ಟ್ರಗಳು ಜಂಟಿಯಾಗಿ ಹೋರಾಡಲಿವೆ’ ಎಂದಿದ್ದಾರೆ.

ಮೂರು ದಿನಗಳ ಭೇಟಿಗಾಗಿ ಮೋದಿ ಇಸ್ರೇಲ್‌ಗೆ ಬಂದಿಳಿಯಲಿದ್ದಾರೆ. ಮೋದಿ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಮಂತ್ರಿ ಎನಿಸಿದ್ದಾರೆ.

ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದು ಮೋದಿ ‘ಇಸ್ರೇಲ್‌ ಹಯೋಮ್‌’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಕ್ಷಣೆ ಹಾಗೂ ಸೈಬರ್‌ ಸುರಕ್ಷತೆಯ ಕ್ಷೇತ್ರಗಳಲ್ಲಿ ಭಾರತ– ಇಸ್ರೇಲ್‌ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.