
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್ (ಐಎಎನ್‌ಎಸ್): ಭಾರತಕ್ಕೆ ಆಪ್ತ ರಾಷ್ಟ್ರ ಸ್ಥಾನಮಾನ ನೀಡುವತ್ತ ಪಾಕಿಸ್ತಾನ ದಿಟ್ಟ ಹಜ್ಜೆ ಇಟ್ಟಿದೆ ಎಂದು ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ತಿಳಿಸಿದ್ದಾರೆ.ಭಾರತದೊಂದಿಗೆ ವ್ಯಾಪಾರ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸುವ ದಿಸೆಯಲ್ಲಿ ಅಗತ್ಯ ಸಹಕಾರ ನೀಡುವಂತೆ ಏಷ್ಯಾ ದೇಶಗಳನ್ನು ಅವರು ಒತ್ತಾಯಿಸಿದ್ದಾರೆ.
ವ್ಯಾಪಾರ ಹಾಗೂ ಹೂಡಿಕೆ ಆಧಾರದ ಮೇಲೆ ಎರಡೂ ದೇಶಗಳು ಪರಸ್ಪರ ಸೌಹಾರ್ದತೆ ಪ್ರತಿಷ್ಠಾಪಿಸದೆ ಹೋದಲ್ಲಿ ನಾವು ಮುಂದೆ ಬಾರಲು ಆಗದು ಎಂದು ಚೀನಾದ ಬಾವೊ ಏಷಿಯನ್ ಫೋರಂ ಸಮ್ಮೇಳನದಲ್ಲಿ ಗಿಲಾನಿ ನುಡಿದಿದ್ದಾರೆ.
ವಿಶ್ವದ ಆರ್ಥಿಕ ಪ್ರಗತಿಗೆ ಏಷಿಯನ್ ರಾಷ್ಟ್ರಗಳ ಪಾಲು ಗಣನೀಯವಾಗಿದ್ದು 2050ರ ಹೊತ್ತಿಗೆ ವಿಶ್ವದ ಆರ್ಥಿಕತೆಯಲ್ಲಿ ಏಷ್ಯಾ ಪಾಲು ಅರ್ಧಕ್ಕಿಂತ ಹೆಚ್ಚಾಗಲಿದೆ. ಹೀಗಾಗಿ 21ನೇ ಶತಮಾನ `ಏಷಿಯನ್ ಶತಮಾನ~ ಎಂದು ಗಿಲಾನಿ ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.