ADVERTISEMENT

ಭಾರತಕ್ಕೆ ನೆರವು ನಿಲ್ಲಿಸುವ ಮನವಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಲಂಡನ್ (ಪಿಟಿಐ): ಭಾರತಕ್ಕೆ ನೀಡಲಾಗುತ್ತಿರುವ ಬಹುಕೋಟಿ ಆರ್ಥಿಕ ನೆರವು ನಿಲ್ಲಿಸಬೇಕೆಂಬ ಕೆಲ ಸಂಸದರ ಬೇಡಿಕೆಯನ್ನು ಬ್ರಿಟನ್ ಸರ್ಕಾರ ತಳ್ಳಿ ಹಾಕಿದೆ.

ಆ ದೇಶಕ್ಕೆ ನೀಡಲಾಗುತ್ತಿರುವ ನೆರವಿನ ಕುರಿತಾಗಿ ಪರಿಶೀಲನೆ ನಡೆಸುವ ಯಾವುದೇ ಯೋಚನೆ ಇಲ್ಲ. ಅಲ್ಲದೇ ನೆರವು ರದ್ದುಪಡಿಸಲು ಇದು ಸೂಕ್ತ ಸಂದರ್ಭವೂ ಅಲ್ಲ ಎಂದು ಬ್ರಿಟನ್ ಹೇಳಿದೆ.

`ದೇಶದ ಅಭಿವೃದ್ಧಿಗಾಗಿ ಮಾಡಲಾಗುತ್ತಿರುವ ಒಟ್ಟು ಖರ್ಚಿನಲ್ಲಿ ಬ್ರಿಟನ್ ನೀಡುತ್ತಿರುವ ನೆರವು ಅತ್ಯಲ್ಪವಾಗಿದೆ. ಆ ದೇಶದ ನೆರವು ಬೇಕಾಗಿಲ್ಲ~ ಎಂದು 2010ರಲ್ಲಿ ಪ್ರಣವ್ ಮುಖರ್ಜಿ ಅವರು ಹೇಳಿದ್ದ ಹಿನ್ನೆಲೆಯಲ್ಲಿ ಬ್ರಿಟನ್‌ನ ಸಂಸದರು ನೆರವು ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಪರಿಹಾರ ಮೊಕದ್ದಮೆ

ಲಂಡನ್ (ಪಿಟಿಐ): ಕಳೆದ ತಿಂಗಳು ಕೋಸ್ಟಾ ಕಾನ್‌ಕಾರ್ಡಿಯಾ ಹಡಗು ದುರಂತದಲ್ಲಿ ಗರ್ಭಪಾತಕ್ಕೆ ಒಳಗಾದ ಇಟಲಿಯ ಮಹಿಳೆಯೊಬ್ಬರು  ಲಕ್ಷಾಂತರ ಯೂರೋ ಪರಿಹಾರಕ್ಕಾಗಿ ಹಡಗಿನ ಮಾಲೀಕನ ಮೇಲೆ ದಾವೆ  ಹೂಡಿದ್ದಾರೆ.

ದಾವೆ ಹೂಡಿದ ಮಹಿಳೆ  ಮಿಲಾನ್‌ನ  ಕ್ರಿಸ್ಟಿನಾ ಎಂ (30),  ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಐದು ತಿಂಗಳ ಗರ್ಭಿಣಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.