
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಇರಾನಿನಿಂದ ತೈಲ ಆಮದನ್ನು ಜೂನ್ ಅಂತ್ಯದ ವೇಳೆಗೆ ಕಡಿತ ಮಾಡದೇ ಹೋದರೆ ಭಾರತದ ಮೇಲೆ ದಿಗ್ಬಂಧನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಇದನ್ನು ತಳ್ಳಿಹಾಕಿರುವ ಅಮೆರಿಕದ ಅಧಿಕಾರಿಗಳು ಇದೊಂದು ಉತ್ಪ್ರೇಕ್ಷಿತ ಊಹೆಯುಳ್ಳ ವರದಿಯಷ್ಟೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ ಅಧಿಕಾರಿಗಳು ಭಾರತ ಹಾಗೂ ಅಮೆರಿಕ ಮಧ್ಯೆ ಇರಾನಿನಿಂದ ಆಮದಾಗುವ ತೈಲ ಕಡಿತಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.