
ಪ್ರಜಾವಾಣಿ ವಾರ್ತೆಲಂಡನ್ (ಪಿಟಿಐ): ಭಾರತದ ಸುಪ್ರಸಿದ್ಧ ಗೋಲ್ಕೊಂಡ ಗಣಿಯಲ್ಲಿ ದೊರೆತ 76 ಕ್ಯಾರೆಟ್‌ನ ವಜ್ರ ಜಿನೀವಾದಲ್ಲಿ 119 ಕೋಟಿ ರೂಪಾಯಿಗೆ ಹರಾಜಾಗಿದೆ.
ಭಾರತದ ಪುರಾತನ ಗಣಿಯಾದ ಗೋಲ್ಕೊಂಡದಲ್ಲಿ ದೊರೆತ ಬಿಳಿ ಬಣ್ಣದ ಈ ವಜ್ರ ಮಂಗಳವಾರ ತಡ ರಾತ್ರಿ ನಡೆದ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿದೆ. ಕೊಹಿನೂರ್ ಮತ್ತು ಬ್ಲೂ ಹೋಪ್ ವಜ್ರಗಳು ಸಹ ಗೋಲ್ಕೊಂಡ ಗಣಿಯಲ್ಲಿಯೇ ದೊರೆತಿತ್ತು ಎಂದು ಗಾರ್ಡಿಯನ್ ವರದಿ ಮಾಡಿದೆ.
`ಗೋಲ್ಕೊಂಡ ವಜ್ರ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ ಮತ್ತು ವಿಶ್ವದಲ್ಲಿಯೇ ಒಂದು ಕ್ಯಾರೆಟ್ ಬಣ್ಣ ರಹಿತ ವಜ್ರಕ್ಕೆ ದೊರೆತ ಅತಿ ಹೆಚ್ಚಿನ ಬೆಲೆ ಇದಾಗಿದೆ~ ಎಂದು ಕ್ರಿಸ್ಟೈನಲ್ಲಿರುವ ಅಂತರರಾಷ್ಟ್ರೀಯ ರತ್ನಾಭರಣ ವಿಭಾಗದ ನಿರ್ದೇಶಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.