ADVERTISEMENT

ಭಾರತೀಯರಿಗೆ ಗೇಟ್ಸ್ ಶಿಷ್ಯವೇತನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಲಂಡನ್ (ಪಿಟಿಐ): ಮೂವರು ಭಾರತೀಯರು ಸೇರಿದಂತೆ 50 ಪರಿಣತರು 2012ನೇ ಸಾಲಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗೇಟ್ಸ್ ಶಿಷ್ಯವೇತನಕ್ಕೆ ಆಯ್ಕೆ ಯಾಗಿದ್ದಾರೆ.
 
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಿದ್ಧಾರ್ಥ ಕರ್, ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಮೇಲ್ವಿಚಾರಣೆಯಲ್ಲಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಸುಹಾಸಿನಿ ಸೆನ್ ಮತ್ತು ಅರ್ಥಶಾಸ್ತ್ರದಲ್ಲಿ ಎಂ.ಫಿಲ್ ಮುಗಿಸಿರುವ ಆನಂದ ಶ್ರೀವಾತ್ಸವ್ ಶಿಷ್ಯವೇತನಕ್ಕೆ ಆಯ್ಕೆಯಾದವರು.

ಸಿದ್ಧಾರ್ಥ ಪುಣೆಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದಾರೆ. ಸುಹಾಸಿನಿ ಹೈದರಾಬಾದ್‌ನ ನಲ್ಸಾರ್ ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಆನಂದ ಸೇಂಟ್ ಎಡ್‌ಮಂಡ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಫಿಲ್ ಮುಗಿಸಿದ್ದಾರೆ.ಈ ಶಿಷ್ಯವೇತನಕ್ಕೆ ಒಟ್ಟು 4,500 ಮಂದಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.