ADVERTISEMENT

ಭಾರತೀಯ ಮೂಲದ ಸಹೋದರರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಅಬುಜಾ (ಪಿಟಿಐ): ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಮೂವರು ಭಾರತೀಯ ಸಹೋದರರಿಗೆ ನೈಜೀರಿಯಾದ ನ್ಯಾಯಾಲಯ ತಲಾ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಲಾಗೋಸ್‌ನಲ್ಲಿ ಸಾಕ್ವಿನ್ ನೈಜೀರಿಯಾ ಲಿಮಿಟೆಡ್ ಎಂಬ ಪ್ಲಾಸ್ಟಿಕ್ ಕಂಪೆನಿ ನಡೆಸುತ್ತಿದ್ದ ಚಂದ್ರು ಗಂಗ್ಲಾನಿ, ಭರತ್ ಮತ್ತು ತ್ರಿಶೂಲ್ ಗಂಗ್ಲಾನಿ ಎಂಬ ಸಹೋದರರು ಶಿಕ್ಷೆಗೆ ಒಳಗಾದವರು.

ಸಾಕ್ವಿನ್ ಕಂಪೆನಿ ತನ್ನ ಉತ್ಪನ್ನಗಳ ನಕಲು ಮಾಡುತ್ತಿದೆ ಎಂದು ಆರೋಪಿಸಿ ರೈಕ್ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಮತ್ತೊಂದು ಪ್ಲಾಸ್ಟಿಕ್ ಕಂಪೆನಿ 2009ರಲ್ಲಿ ನ್ಯಾಯಾಲಯಕ್ಕೆ ದೂರು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ವಿನ್ ಕಂಪೆನಿಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಗೆ ನಿಷೇಧ ಹೇರಿ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶದ ಹೊರತಾಗಿಯೂ ಗಂಗ್ಲಾನಿ ಸಹೋದರರ ಕಂಪೆನಿ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ರೈಕ್, ಕೋರ್ಟ್ ಮೆಟ್ಟಿಲೇರಿತ್ತು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.