ವಾಷಿಂಗ್ಟನ್(ಪಿಟಿಐ): ಭಾರತ–ಪಾಕಿಸ್ತಾನ ವಿಭಜನೆಯ ಅತ್ಯಂತ ಕರಾಳ ನೆನಪುಗಳನ್ನು ಉಳಿಸಿಕೊಳ್ಳುವ ಯೋಜನೆಯೊಂದು ಸದ್ದಿಲ್ಲದೆ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿದೆ.
ಬರ್ಕಿಲಿ ನಗರದಲ್ಲಿರುವ ಕ್ಯಾಲಿಫೋರ್ನಿಯಾ ವಿವಿ ಸಂಶೋಧನಾರ್ಥಿ ಹಾಗೂ ಭಾರತ ಮೂಲದ ಗುಣಿತಾ ಸಿಂಗ್ ಭಲ್ಲಾ ಅವರು ಇತಿಹಾಸ ಆಸಕ್ತ ಸಮಾನ ಮನಸ್ಕರರೊಂದಿಗೆ ಹುಟ್ಟು ಹಾಕಿರುವ ಸ್ವಯಂಸೇವಾ ಸಂಸ್ಥೆ ಈ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡಿದೆ.
1947ರ ಭಾರತ–ಪಾಕಿಸ್ತಾನ ವಿಭಜನೆಯ ನೆನಪುಗಳನ್ನು ಸಂಗ್ರಹಿಸಿಡುವ ನಿಟ್ಟಿನಲ್ಲಿ ಈ ಘಟನೆಗೆ ಸಾಕ್ಷಿಯಾದ ಜನರನ್ನು ಭೇಟಿಯಾಗಿ ಸುಮಾರು ಒಂದು ಸಾವಿರ ಸಂದರ್ಶನಗಳನ್ನು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.