ADVERTISEMENT

ಭಾರತ, ಚೀನಾ ವಿದ್ಯಾರ್ಥಿಗಳಿಗೆ ಈಗ ಆಸ್ಟ್ರೇಲಿಯಾ ಅಲರ್ಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 15:30 IST
Last Updated 16 ಫೆಬ್ರುವರಿ 2011, 15:30 IST

ಮೆಲ್ಬರ್ನ್ (ಪಿಟಿಐ): ವಿದ್ಯಾರ್ಥಿ ವೀಸಾ ನಿಯಮ ಬದಲಾದ ನಂತರ ಆಸ್ಟ್ರೇಲಿಯಾದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ಭಾರತ ಮತ್ತು ಚೀನಾ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಚೀನಾದ ವಿದ್ಯಾರ್ಥಿಗಳು ಈಗ ವಿದ್ಯಾಭ್ಯಾಸಕ್ಕಾಗಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ವಿಶ್ವವಿದ್ಯಾಲಯಗಳತ್ತ ಗಮನ ಹರಿಸಿದ್ದಾರೆ. ಹೊಸದಾಗಿ ಜಾರಿಗೆ ತಂದ ವಿದ್ಯಾರ್ಥಿ ವೀಸಾ ನಿಯಮದಿಂದಾಗಿ ಆಸ್ಟ್ರೇಲಿಯಾದ 18 ಶತಕೋಟಿ ಅಮೆರಿಕನ್ ಡಾಲರ್ ಶೈಕ್ಷಣಿಕ ಉದ್ಯಮ ಕುಸಿಯತೊಡಗಿದೆ ಎಂದು ಬೀಜಿಂಗ್‌ನ ಸಂಸ್ಥೆಯೊಂದರ ಕಾರ್ಯನಿರ್ವಾಹಕ ಲಿ ಪಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರಕ್ಕೆ ದೂರಾಲೋಚನೆ ಇಲ್ಲ. ಹಾಗಾಗಿ ತಪ್ಪು ವೀಸಾ ನಿಯಮ ರಚಿಸಿ ಶೈಕ್ಷಣಿಕ ವರಮಾನವನ್ನು ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.