ADVERTISEMENT

ಭಾರತ ಮೂಲದ ಕಲಾವಿದನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ವೆಲ್ಲಿಂಗ್ಟನ್(ಐಎಎನ್‌ಎಸ್/ಪಿಟಿಐ): ನ್ಯೂಜಿಲೆಂಡ್‌ನ ಪ್ರಮುಖ ಕಲಾ ಗ್ಯಾಲರಿ ನೀಡುವ ಉನ್ನತ ಪ್ರಶಸ್ತಿಗೆ ಭಾರತ ಮೂಲದ ಕಲಾವಿದರೊಬ್ಬರು ಭಾಜನರಾಗಿದ್ದಾರೆ.

ಭಾರತ ಮೂಲದ ಪ್ರಕಾಶ್ ಪಟೇಲ್ ಅವರು ಬಿಡಿಸಿದ `ಆಸ್ಟ್ರೊನಾಟ್' ಹೆಸರಿನ ಚಿತ್ರಕ್ಕೆ ನ್ಯೂಜಿಲೆಂಡ್‌ನ ಉತ್ತರ ದ್ವೀಪದ ಸರ್‌ಜಿಯಾಂಟ್ ಗ್ಯಾಲರಿ ಈ ಪ್ರಶಸ್ತಿ ನೀಡಿದೆ. ಪಟೇಲ್ ಅವರು ನ್ಯೂಜಿಲೆಂಡ್‌ನ ವಾಂಗಾನುಯಿಯಲ್ಲಿ ನೆಲೆಸಿದ್ದಾರೆ.

ಈ ಪ್ರಶಸ್ತಿಯು ಸರ್‌ಜಿಯಾಂಟ್ ಗ್ಯಾಲರಿಯ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿದೆ. ಪಟೇಲ್ ಅವರಿಗೆ ಜೂನ್ 7ರಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಇಲ್ಲಿನ ಪತ್ರಿಕೆ ಮಂಗಳವಾರದಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.