ADVERTISEMENT

ಭಾರತ ಮೂಲದ ನಟನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 20:00 IST
Last Updated 18 ಜುಲೈ 2013, 20:00 IST
ಭಾರತ ಮೂಲದ ನಟನ ಶವ ಪತ್ತೆ
ಭಾರತ ಮೂಲದ ನಟನ ಶವ ಪತ್ತೆ   

ಲಂಡನ್ (ಪಿಟಿಐ): ಜೇಮ್ಸ ಬಾಂಡ್ ಚಲನಚಿತ್ರ `ಕ್ಯಾಸಿನೊ ರಾಯೇಲ್' ಮತ್ತು ಅನೇಕ ಜನಪ್ರಿಯ ಟಿವಿ ಧಾರಾವಾಹಿ, ನಾಟಕಗಳಲ್ಲಿ ಅಭಿನಯಿಸಿದ್ದ ಭಾರತ ಮೂಲದ ಬ್ರಿಟಿಷ್ ನಟ ಪಾಲ್ ಭಟ್ಟಾಚಾರ್ಜಿ (53) ಅವರ ಮೃತದೇಹ ಆಗ್ನೇಯ ಇಂಗ್ಲೆಂಡ್‌ನ ಈಸ್ಟ್ ಸಸ್ಸೆಕ್ಸ್‌ನಲ್ಲಿ ಪತ್ತೆಯಾಗಿರುವುದಾಗಿ ತನಿಖೆ ಕೈಗೊಂಡಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಜುಲೈ10ರಂದು ಇಲ್ಲಿನ ವೆಸ್ಟ್ ಎಂಡ್‌ನಲ್ಲಿ ನಡೆದ ನಾಟಕವೊಂದರ ರಿಹರ್ಸಲ್ ನಂತರ ನಾಪತ್ತೆಯಾಗಿದ್ದ ಪಾಲ್ ಅವರ ಶವ ಸೀಫೋರ್ಡ್‌ನ ಪ್ರಪಾತವೊಂದರಲ್ಲಿ ಬಿದ್ದಿತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.