ಟಿಬಿಲಿಸಿ (ಜಾರ್ಜಿಯಾ) (ಎಎಫ್‌ಪಿ): ಪ್ರವಾಹದ ನೀರು ನುಗ್ಗಿದ್ದರಿಂದ ಇಲ್ಲಿನ ಮೃಗಾಲಯದಿಂದ ತಪ್ಪಿಸಿಕೊಂಡಿರುವ ಸಿಂಹ, ಹುಲಿ ಮತ್ತು ನೀರುಕುದುರೆಗಳು ಟಿಬಿಲಿಸಿ ನಗರದಾದ್ಯಂತ ಅಲೆದಾಡುತ್ತಿದ್ದು, ಪ್ರವಾಹದಿಂದ ಈಗಾಗಲೆ ತತ್ತರಿಸಿರುವ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಪ್ರವಾಹಕ್ಕೆ ಒಂದೇ ದಿನದಲ್ಲಿ 12 ಮಂದಿ ಬಲಿಯಾಗಿದ್ದಾರೆ.ಪೊಲೀಸರು ಮತ್ತು ಸೈನಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಪ್ರಾಣಿಗ
ಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಮೃಗಾಲಯದಲ್ಲಿದ್ದ ಬಹುತೇಕ ಪ್ರಾಣಿಗಳು ನಗರದಲ್ಲಿ ಅಲೆದಾಡುತ್ತಿದ್ದು, ನಾಗರಿಕರು ಮನೆ ಬಿಟ್ಟು ಹೊರಬರದಂತೆ ಸೂಚಿಸಲಾಗಿದೆ.
‘ಪ್ರಾಣಿಗಳನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಮೃಗಾಲಯ ಸಂಪೂರ್ಣ ನಾಶವಾಗಿದೆ. ಈವರೆಗೆ 20 ತೋಳಗಳು, ಎಂಟು ಸಿಂಹ, ಹಲವು ಹುಲಿಗಳು, ನರಿಗಳು ಮತ್ತು ಚಿರತೆಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹಲವು ಪ್ರಾಣಿಗಳು ನಾಪತ್ತೆಯಾಗಿವೆ. ನಮ್ಮಲ್ಲಿದ್ದ 17 ಪೆಂಗ್ವಿನ್‌ಗಳಲ್ಲಿ ಮೂರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ’ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.