
ಪ್ರಜಾವಾಣಿ ವಾರ್ತೆಮಾಸ್ಕೊ (ಎಎಫ್‌ಪಿ): ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅರ್ಧ ವರ್ಷಕ್ಕೂ ಹೆಚ್ಚು ಕಾಲ ಕಳೆದ ರಷ್ಯಾದ ಇಬ್ಬರು ಮತ್ತು ಅಮೆರಿಕದ ಒಬ್ಬ ಗಗನಯಾತ್ರಿ ಮಂಗಳವಾರ ಕಜಖಸ್ತಾನದಲ್ಲಿ ಬಂದಿಳಿದರು.
 
 ಅಂತರಿಕ್ಷ ಯಾನ ಕೈಗೊಂಡಿದ್ದ ರಷ್ಯಾದ ಒಲೆಗ್ ಕೊಟಾವ್ ಮತ್ತು ಸರ್ಗೀ ರ್‍್ಯಾಜನ್ಸ್ಕಿ ಹಾಗೂ ನಾಸಾದ ಮೈಕ್ ಹಾಪ್‌ಕಿನ್ಸ್ ಅವರು ಯಶಸ್ವಿಯಾಗಿ ಭೂಮಿಗೆ ಮರಳಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.