ಲಾಹೋರ್ (ಪಿಟಿಐ): ಮುಂಬೈ ದಾಳಿಯ ತನಿಖೆ ಸಂಬಂಧ ಪಾಕಿಸ್ತಾನದ ನ್ಯಾಯಾಂಗ ಸಮಿತಿಯು ಇತ್ತೀಚೆಗೆ ಕೈಗೊಂಡಿದ್ದ ಭಾರತ ಪ್ರವಾಸ ನಿಷ್ಪ್ರಯೋಜಕ ಎಂದು ಪ್ರಕರಣದ ಆರೋಪಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಜಕೀವುರ್ ರೆಹಮಾನ್ ಲಕ್ವಿ ಪರ ವಕೀಲ ಖ್ವಾಜಾ ಹ್ಯಾರಿಸ್ ಅಹಮದ್ ತಿಳಿಸಿದ್ದಾರೆ.
`ಪಾಟೀ ಸವಾಲಿಗೆ ಅವಕಾಶ ಕೊಡುವುದಿಲ್ಲ ಎಂದು ತಿಳಿದಿದ್ದರೆ ನಾವು ಭಾರತಕ್ಕೆ ಹೋಗುತ್ತಿರಲಿಲ್ಲ~ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.