ADVERTISEMENT

ಮಂಗಳೂರು ವಿಮಾನ ದುರಂತ: ಪರಿಹಾರ ಕೋರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ದುಬೈ (ಪಿಟಿಐ): ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ನೆಲೆಸಿರುವ ಕನಿಷ್ಠ ಹತ್ತು ಭಾರತೀಯ ಕುಟುಂಬಗಳು, ಮಂಗಳೂರು ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಲು ನಿರ್ಧರಿಸಿವೆ.

ಪರಿಹಾರ ಕೋರುವ ಹಕ್ಕು ಮುಂದಿನ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿರುವುದರಿಂದ ಈ ಕುಟುಂಬಗಳು ಎರಡು ವಾರಗಳೊಳಗೆ ಈ ಸಂಬಂಧ ಅರ್ಜಿ ಸಲ್ಲಿಸಲಿವೆ ಎಂದು ದಿ ನ್ಯಾಷನಲ್ ನ್ಯೂಸ್‌ಪೇಪರ್ ವರದಿ ಮಾಡಿದೆ.

ದುರಂತ ಘಟಿಸಿ 2ವರ್ಷ ಆಗಲಿರುವ ಸಂದರ್ಭದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಮಾಂಟ್ರಿಯಲ್ ಒಪ್ಪಂದದಂತೆ ಪರಿಹಾರಕ್ಕೆ ಕೇವಲ ಎರಡು ವರ್ಷಗಳ ಗಡುವು ನೀಡಲಾಗಿರುವುದರಿಂದ ಆದಷ್ಟು ಶೀಘ್ರದಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಮಂಗಳೂರು ವಿಮಾನ ದುರಂತದಲ್ಲಿ ಬಲಿಯಾದವರ ಕುಟುಂಬಗಳ ಸಂಘಟನೆ ಈ ಕುಟುಂಬಗಳನ್ನು ಒತ್ತಾಯಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.